ETV Bharat / state

ಮೈಸೂರು ಜಿಲ್ಲೆಯಲ್ಲಿ ಮಾರ್ಚ್ 12ರಂದು ಲೋಕ್ ಅದಾಲತ್

ರಾಜಿ ಇತ್ಯರ್ಥಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಪ್ರಕರಣಗಳ ಸಂಖ್ಯೆಯು ಒಟ್ಟು 11,120 ಇದ್ದು, ಅದರಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣಗಳು 3,770, ಕ್ರಿಮಿನಲ್ ಪ್ರಕರಣಗಳು 2736, 138 ಎನ್.ಐ.ಆ್ಯಕ್ಟ್ ಕೇಸ್ ಸೇರಿ ಒಟ್ಟು 22,588 ಅವುಗಳಲ್ಲಿ 4,548 ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವ ವಾಜ್ಯ ಪೂರ್ವ ಪ್ರಕರಣಗಳು 66 ಇವೆ.

Lok Adalat
ಮೈಸೂರು ಜಿಲ್ಲೆಯಲ್ಲಿ ಮಾರ್ಚ್ ೧೨ ರಂದು ಲೋಕ್ ಅದಾಲತ್
author img

By

Published : Feb 22, 2022, 10:58 PM IST

Updated : Feb 22, 2022, 11:08 PM IST

ಮೈಸೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಅವರ ನಿರ್ದೇಶನದಂತೆ ಮಾರ್ಚ್ 12 ರಂದು ಲೋಕ್ ಅದಾಲತ್ ನ್ನು ಮೈಸೂರು ಜಿಲ್ಲೆಯಲ್ಲಿ ಮಾಡಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷ ಎಂ.ಎಲ್. ರಘುನಾಥ್ ತಿಳಿಸಿದ್ದಾರೆ.

ಇಂದು ನಗರದ ಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯದ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಂ.ಎಲ್. ರಘುನಾಥ್ ಅವರು, ಮೈಸೂರು ಜಿಲ್ಲೆಯಲ್ಲಿ ಮಾರ್ಚ್ 12 ರಂದು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ರಾಷ್ಟ್ರೀಯ ಲೋಕ್ ಅದಾಲತ್​ನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಳೆದ ಬಾರಿ ಮೈಸೂರು ಜಿಲ್ಲೆಯಲ್ಲಿ 52 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥ ಮಾಡಿ ರಾಜಿ ಮಾಡಿಸಲಾಗಿದ್ದು, ರಾಜ್ಯದಲ್ಲಿಯೇ ಮೈಸೂರು ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ. ಈ ಬಾರಿಯು ಇನ್ನೂ ಹೆಚ್ಚು ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ರಾಜಿ ಮಾಡಿಸಿ ಇತ್ಯರ್ಥ ಮಾಡಿಸುವ ಗುರಿ ಇದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಮಾರ್ಚ್ 12ರಂದು ಲೋಕ್ ಅದಾಲತ್

ಮೈಸೂರು ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 1,09,553 ಪ್ರಕರಣಗಳು ಬಾಕಿಯಿದ್ದು, ಅವುಗಳ ಪೈಕಿ 50,256 ಸಿವಿಲ್ ಹಾಗೂ 59,553 ಕ್ರಿಮಿನಲ್ ಪ್ರಕರಣಗಳಿವೆ. ಅದರಲ್ಲಿ 84,256 ಪ್ರಕರಣಗಳು ಇತ್ಯರ್ಥವಾಗುವ ಸಂಭವವಿದ್ದು, ಅವುಗಳ ಪೈಕಿ ಈಗಾಗಲೇ 29,069 ಪ್ರಕರಣಗಳನ್ನು ರಾಜಿಯಾಗುವ ಪ್ರಕರಣಗಳು ಎಂದು ಗುರುತಿಸಿಸಲಾಗಿದೆ ಎಂದರು.

ರಾಜಿ ಇತ್ಯರ್ಥಕ್ಕಾಗಿ ಅಯ್ಕೆ ಮಾಡಿಕೊಂಡಿರುವ ಪ್ರಕರಣಗಳ ಸಂಖ್ಯೆ: ರಾಜಿ ಇತ್ಯರ್ಥಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಪ್ರಕರಣಗಳ ಸಂಖ್ಯೆಯು ಒಟ್ಟು 11,120 ಇದ್ದು ಅದರಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣಗಳು 3,770, ಕ್ರಿಮಿನಲ್ ಪ್ರಕರಣಗಳು 2736, 138 ಎನ್.ಐ. ಆ್ಯಕ್ಟ್ (ಚೆಕ್ ಬೌನ್ಸ್) ಕೇಸ್ ಒಟ್ಟು 22,588 ಅವುಗಳಲ್ಲಿ 4,548 ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವ ವಾಜ್ಯ ಪೂರ್ವ ಪ್ರಕರಣಗಳು 66 ಇವೆ ಎಂದು ತಿಳಿಸಿದ್ದಾರೆ.

ಈ ಬಾರಿ ರಾಜಿಯಾಗದ ವಿಚ್ಛೇದನ ಪ್ರಕರಣಗಳು, ವಾಹನ ಅಪಘಾತ ಪ್ರಕರಣಗಳು ಗಮನಕ್ಕೆ ಬಂದಿದೆ. ಅವುಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು. ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯ್ಯಾಲಯಗಳಲ್ಲಿ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿದರೇ ಅಂತಹ ಪ್ರಕರಣಗಳನ್ನು ರಾಜಿ ಮಾಡಿಸಲಾಗುವುದು. ಗ್ರಾಮೀಣ ಭಾಗದ ಜನರು ಲೋಕ್ ಅದಾಲತ್​ನ ಉಪಯೋಗ ಪಡೆದುಕೊಳ್ಳಬೇಕು ಎಂದು ಎಂ.ಎಲ್. ರಘುನಾಥ್ ಕರೆ ನೀಡಿದರು.

ಇದನ್ನೂ ಓದಿ: ಹಿಜಾಬ್ ಧರಿಸಿದವರನ್ನು ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ಕೋರಿ ಹೈಕೋರ್ಟ್​ಗೆ ಅರ್ಜಿ

Last Updated : Feb 22, 2022, 11:08 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.