ETV Bharat / state

ಲಾಕ್‌ಡೌನ್​ ಎಫೆಕ್ಟ್.. ಕೂಲಿ, ಕೂಳು ಇಲ್ಲದೇ ಮೈಸೂರಿನ ಸ್ಲಂ‌ ನಿವಾಸಿಗಳ ಪರದಾಟ.. - ಮೈಸೂರು ಸುದ್ದಿ

ಕೈಗಾರಿಕೆ ಪ್ರದೇಶಗಳು ತೆರೆದಾಗ, ಕೆಲಸ ಮಾಡುವ ನೌಕರರು ಮಾನವೀಯತೆಯಿಂದ ಏನಾದರೂ ತಿಂಡಿ-ತಿನ್ನಿಸುಗಳನ್ನು ಮಕ್ಕಳಿಗೆ ಕೊಡುತ್ತಿದ್ದರು. ಆದರೀಗ ಮಕ್ಕಳಿಗೂ ಒಂದು ಚಾಕೊಲೇಟ್ ತಂದು ಕೊಡಲು ಆಗುತ್ತಿಲ್ಲವೆಂಬ ಅಸಹಾಯಕತೆ ಮೂಡತೊಡಗಿದೆ.

Lock down effect in mysore
ಸ್ಲಂ‌ ನಿವಾಸಿಗಳ ಪರದಾಟ
author img

By

Published : Apr 4, 2020, 10:44 AM IST

ಮೈಸೂರು : ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್​ ಮಾಡಲಾಗಿದೆ. ಇದರಿಂದ ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಕೂಲಿ ಇಲ್ಲದೇ ಒಂದೊತ್ತಿನ ಊಟ ವಿಲ್ಲದೇ ಹಸಿವಿನಿಂದ ಬಳಲುತ್ತಿದ್ದಾರೆ.

ಸ್ಲಂ‌ ನಿವಾಸಿಗಳ ಪರದಾಟ..

ಜಿಲ್ಲಾಡಳಿತ ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ನಾನಾ ಮಾರ್ಗಗಳನ್ನು ಕಂಡು ಕೊಂಡಿದೆ. ಆದರೆ, ಇನ್ನೂ ಅಸಂಘಟಿತ ಹಾಗೂ ಕೂಲಿ ಕಾರ್ಮಿಕರಿಗೆ ಇಂದಿಗೂ ಅಗತ್ಯ ಸೌಕರ್ಯ ತಲುಪುತ್ತಿಲ್ಲ. ಇದರಿಂದ ಹಸಿವಿನಿಂದ ಬಳಲುತ್ತಿರುವ ಇವರಿಗೆ ಯಾರ ಬಳಿ ನಾವು ಕೈ ಚಾಚಿ ಬದುಕು ದೂಡುವುದು ಎಂಬ ಚಿಂತೆ ಆವರಿಸಿದೆ. ಮೈಸೂರಿನ ಬನ್ನಿಮಂಟಪದ ಕೈಗಾರಿಕಾ ಪ್ರದೇಶದ ವ್ಯಾಪ್ತಿಗೆ ಹೊಂದಿರುವ ಪ್ರದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಕೂಲಿ ನಂಬಿಕೊಂಡಿರುವ ಇವರ ಬದುಕು ಅಯೋಮಯ. ಯಾವ ಅಧಿಕಾರಿಯೂ ಕೂಡ ಸುಳಿದು ಇವರ ಸಮಸ್ಯೆ ಕೇಳುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.

ಅಸಂಘಟಿತ ಕಾರ್ಮಿಕರು ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಜಿಲ್ಲಾಡಳಿತ ಹಾಗೂ ವಲಯ ಸಂಘ ಸಂಸ್ಥೆಗಳು ನೆರವು ನೀಡುತ್ತವೆ. ಆದರೆ, ಈವರೆಗೆ ಯಾರೂ ನೆರವು ನೀಡಲು ಇಲ್ಲಿಗೆ ಬಂದಿಲ್ಲವೆಂದು ಇಲ್ಲಿನ ನಿವಾಸಿಗಳ ಬೇಸರ. ಇಲ್ಲಿ ವಾಸಿಸುತ್ತಿರುವ ಜನ ಕೂಲಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕೊರೋನಾ ವೈರಸ್ ಭೀತಿಯಿಂದ ಹಾಗೂ ಲಾಕ್‌ಡೌನ್ ಆಗಿರುವುದರಿಂದ ಹೊರಗಡೆ ಕೂಲಿಗೆ ಹೋಗಲು ಆಗುತ್ತಿಲ್ಲ. ಅವತ್ತು ದುಡಿದ್ರೇ ಅವತ್ತೇ ನಮ್ಮೆಲ್ಲರ ಕೂಳು. ಹೀಗಾದರೆ, ಮುಂದಿನ ಗತಿಯೇನು ಎಂಬ ಚಿಂತೆ ಕಾಡತೊಡಗಿದೆ.

ಕೈಗಾರಿಕೆ ಪ್ರದೇಶಗಳು ತೆರೆದಾಗ, ಕೆಲಸ ಮಾಡುವ ನೌಕರರು ಮಾನವೀಯತೆಯಿಂದ ಏನಾದರೂ ತಿಂಡಿ-ತಿನ್ನಿಸುಗಳನ್ನು ಮಕ್ಕಳಿಗೆ ಕೊಡುತ್ತಿದ್ದರು. ಆದರೀಗ ಮಕ್ಕಳಿಗೂ ಒಂದು ಚಾಕೊಲೇಟ್ ತಂದು ಕೊಡಲು ಆಗುತ್ತಿಲ್ಲವೆಂಬ ಅಸಹಾಯಕತೆ ಮೂಡತೊಡಗಿದೆ. ಜಿಲ್ಲಾಡಳಿತ ಬಡವರ ಹಾಗೂ ಅಸಂಘಟಿತ ಕಾರ್ಮಿಕರ ಸಹಾಯ ಮಾಡುತ್ತಿದೆ. ಅದರಂತೆ ಕೂಲಿ ಅರಸಿ ಬಂದು ಟೆಂಟ್ ನಿರ್ಮಿಸಿಕೊಂಡು ವಾಸಿಸುತ್ತಿರುವ ನಮಗೂ ಬದುಕಲು ಅನ್ನ-ನೀರು ಕೊಡಿ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.