ETV Bharat / state

ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

author img

By

Published : Jun 23, 2020, 3:17 PM IST

Updated : Jun 23, 2020, 3:29 PM IST

ಟೆಂಟ್ ಸರ್ಕಲ್​ನಲ್ಲಿ ಲಾಕ್​ಡೌನ್ ಸಡಿಲಿಕೆ ನಂತರ ವೈನ್ ಶಾಪ್ ಹಾಗೂ ಬಾರ್ ಆ್ಯಂಡ್​‌ ರೆಸ್ಟೋರೆಂಟ್​ಗಳು ಆರಂಭವಾಗಿವೆ. ಇದರಿಂದ ಮಹಿಳೆಯರು, ಮಕ್ಕಳು ಓಡಾಡಲು ಕಷ್ಟವಾಗಿದೆ.

wine-shop
ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಆಗ್ರಹ

ಮೈಸೂರು: ಜನವಸತಿ ಪ್ರದೇಶದಲ್ಲಿರುವ ಬಾರ್ ಅಂಡ್​ ರೆಸ್ಟೋರೆಂಟ್‌ನ ತೆರವುಗೊಳಿಸಿ ಎಂದು ಸಾರ್ವಜನಿಕರೇ ಪ್ರತಿಭಟನೆ ನಡೆಸಿದ ಘಟನೆ ನಗರದ ಕ್ಯಾತಮಾರನಹಳ್ಳಿಯ ಟೆಂಟ್ ಸರ್ಕಲ್​ನಲ್ಲಿ ನಡೆದಿದೆ.

ನಗರದ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕ್ಯಾತಮಾರನಹಳ್ಳಿ ಟೆಂಟ್ ಸರ್ಕಲ್​ನಲ್ಲಿ ಲಾಕ್​ಡೌನ್ ನಂತರ ವೈನ್ ಶಾಪ್ ಹಾಗೂ ಬಾರ್ ಅಂಡ್​‌ ರೆಸ್ಟೋರೆಂಟ್​ಗಳು ಆರಂಭವಾಗಿವೆ. ಇದರಿಂದ ಮಹಿಳೆಯರು, ಮಕ್ಕಳು ಓಡಾಡಲು ಕಷ್ಟವಾಗಿದೆ. ಜೊತೆಗೆ ನೆಮ್ಮದಿಯಿಂದ ಇಲ್ಲಿ ಬದುಕಲು ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಾರ್ ಆ್ಯಂಡ್​ ರೆಸ್ಟೋರೆಂಟ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಕೂಡಲೇ ವೈನ್‌ಶಾಪ್, ಬಾರ್ ಆ್ಯಂಡ್​‌ ರೆಸ್ಟೋರೆಂಟ್​ಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​​ ಏರ್ಪಡಿಸಲಾಗಿತ್ತು.

Last Updated : Jun 23, 2020, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.