ಮೈಸೂರು: ಲಾಕ್ಡೌನ್ ಸಡಿಲಿಕೆಯಾದರೂ ಬೀದಿಯಲ್ಲಿ ಬಿದಿರು ಬುಟ್ಟಿ ಹೆಣೆಯುವವರಿಗೆ ಬೇಡಿಕೆ ಇಲ್ಲವಾಗಿದೆ. ಹೀಗಾಗಿ ಅವರ ಬದುಕು ಸಂಕಷ್ಟದಲ್ಲಿದೆ.
ನಗರದ ಬಂಬೂ ಬಜಾರ್ ರಸ್ತೆಯ ಬದಿಯಲ್ಲಿ ಕಳೆದ 50 ವರ್ಷಗಳಿಂದ ಬಿದಿರಿನಲ್ಲೇ ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿದ್ದರು. ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ಬಿದಿರು ಬೊಂಬು ಸಹ ಸರಿಯಾಗಿ ಸಿಗುತ್ತಿಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಾರೆ ಬುಟ್ಟಿ ತಯಾರಿಸುವ ಮಂಗಳಮ್ಮ.