ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಲಕ್ಷ್ಮಿ ಜಿರಾಫೆಗೆ ಮರಿಯೊಂದು ಜನಿಸಿದೆ. ಈ ಮೂಲಕ ಜಿರಾಫೆ ಮರಿಗಳ ದಾಖಲೆ ನಿರ್ಮಾಣವಾಗಿದೆ.
ಲಕ್ಷ್ಮಿ ಮತ್ತು ಭರತ್ ಜೋಡಿ ಜಿರಾಫೆಗೆ ಜುಲೈ 12ರಂದು ಒಂದು ಗಂಡು ಮರಿ ಜಿರಾಫೆ ಜನನವಾಗಿದೆ. ಲಕ್ಷ್ಮಿಗೆ ಇದು ನಾಲ್ಕನೇ ಮರಿಯಾಗಿದೆ. ಮೈಸೂರು ಮೃಗಾಲಯದಲ್ಲಿ ಇಲ್ಲಿಯವರೆಗೆ 22 ಜಿರಾಫೆ ಮರಿಗಳ(17 ಗಂಡು ಮತ್ತು 5 ಹೆಣ್ಣು) ಜನನದ ದಾಖಲೆಯನ್ನು ಹೊಂದಿದೆ.
ಲಕ್ಷ್ಮಿ ತನ್ನ ಮರಿಯ ಲಾಲನೆ ಮತ್ತು ಪಾಲನೆಯನ್ನು ಮಾಡುತ್ತಿದೆ. ಮರಿಯು ಆರೋಗ್ಯವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಉತ್ತರಕನ್ನಡ ಜಿಲ್ಲೆಗೆ ಸಿಎಂ ಬೊಮ್ಮಾಯಿ ಪ್ರವಾಸ: ಪ್ರವಾಹ ಪರಿಸ್ಥಿತಿ ಪರಿಶೀಲನೆ