ETV Bharat / state

'ಕ.ರಾ.ಮು.ವಿಯಲ್ಲಿ ಈ ಬಾರಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಗುರಿ, ಜ.12ರಿಂದ ಪ್ರಕ್ರಿಯೆ' - ಕರಾಮುವಿ ಪ್ರವೇಶಾತಿ

ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಾತಿಯು ಜ.12ರಿಂದ 31ರವರೆಗೆ ನಡೆಯಲಿದೆ. ಈ ಬಾರಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ.

ksou
ಕರ್ನಾಟಕ ರಾಜ್ಯ ಮುಕ್ತ ವಿವಿ
author img

By ETV Bharat Karnataka Team

Published : Jan 11, 2024, 9:07 AM IST

ಮೈಸೂರು: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಗುರಿ ಇದೆ ಎಂದು ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾಹಿತಿ ನೀಡಿದ್ದಾರೆ. ಬುಧವಾರ ವಿವಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಜ.12ರಿಂದ ಮಾ.31ರವರೆಗೆ ನಡೆಯಲಿದೆ. ವಿವಿಯಲ್ಲಿ 64 ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿವೆ. ಈ ಪೈಕಿ 44 ಆಫ್​​ಲೈನ್, 10 ಆನ್‌ಲೈನ್ ಕೋರ್ಸ್‌ಗಳಾಗಿವೆ. ಹೊಸದಾಗಿ ಎಂಎಸ್‌ಡಬ್ಲೂ, ಎಂಸಿಎ ಕೋರ್ಸ್‌ಗಳು ಪ್ರಾರಂಭಗೊಂಡಿವೆ. ಇದರೊಂದಿಗೆ ಅರ್ಥ್‌ಸೈನ್ಸ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಲು ಯುಜಿಸಿ ತಂಡ ಜ.17ರಂದು ವಿವಿಗೆ ಆಗಮಿಸಲಿದೆ" ಎಂದರು.

"ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸ್ಟಡಿ ಸೆಂಟರ್ ತೆರೆಯಲು ಉದ್ದೇಶಿಸಲಾಗಿದೆ. ಕೆಲವೊಂದು ಪ್ರಾದೇಶಿಕ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ" ಎಂದು ತಿಳಿಸಿದರು.

"ಪಿಹೆಚ್‌ಡಿ ಕೋರ್ಸ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳೊಳಗೆ ನೋಟಿಫಿಕೇಷನ್ ಹೊರಡಿಸಲಾಗುವುದು. 22 ಪ್ರಾಧ್ಯಾಪಕರಿಗೆ ಪಿಹೆಚ್‌ಡಿ ಮಾರ್ಗದರ್ಶನ ನೀಡುವ ಅನುಮತಿ ದೊರೆತಿದೆ. ಪ್ರತಿ ಪ್ರಾಧ್ಯಾಪಕರು 4ರಿಂದ 5 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಒಟ್ಟು ನೂರು ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಕೋರ್ಸ್‌ಗೆ ಅವಕಾಶ ಮಾಡಿಕೊಡಲಾಗುವುದು" ಎಂದು ಮಾಹಿತಿ ನೀಡಿದರು.

"ಆಸಕ್ತರಿಗೆ ವಿದೇಶಿ ಭಾಷೆಗಳ ಕಲಿಕೆಯ ಶಿಕ್ಷಣ ಒದಗಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಂದಾಗಿದೆ. ಈ ಸಂಬಂಧ ವಿಶ್ವವಿದ್ಯಾಲಯವು ದಿಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಜಾಗತಿಕ ಬೇಡಿಕೆಗೆ ಅನುಗುಣವಾಗಿ ಜರ್ಮನಿ, ಫ್ರೆಂಚ್, ಸ್ಪ್ಯಾನಿಷ್, ಅರೇಬಿಕ್ ಸೇರಿದಂತೆ ವಿವಿಧ ಭಾಷೆಗಳನ್ನು ದೂರ ಶಿಕ್ಷಣ ಹಾಗೂ ಆನ್‌ಲೈನ್ ಮೂಲಕ ಕಲಿಸುವ ಯೋಜನೆ ಇದೆ. ಇದಕ್ಕೆ ಬೇಕಾದ ನೆರವನ್ನು ಜೆಎನ್‌ಯು ಒದಗಿಸಲಿದೆ" ಎಂದರು.

ಮುಕ್ತವಾಣಿ ಬಾನುಲಿ ಸರಣಿ: "ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಧ್ಯಯನ ಅವಕಾಶಗಳ ಕುರಿತ ಪ್ರಾಯೋಜಿತ ಬಾನುಲಿ ಸರಣಿ 'ಮುಕ್ತವಾಣಿ' ಜ.12ರಿಂದ ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಪ್ರತಿ ಶುಕ್ರವಾರ ಬೆಳಿಗ್ಗೆ 6.40ರಿಂದ 6.50ರವರೆಗೆ ಪ್ರಸಾರವಾಗಲಿದ್ದು, ಸಂಜೆ 5.45ರಿಂದ 5.55ರವರೆಗೆ ಮರುಪ್ರಸಾರವಿರುತ್ತದೆ. ಈ ಕಾರ್ಯಕ್ರಮ ಜ.12 ರಿಂದ 2025ರ ಜ. 3ರವರೆಗೆ ಪ್ರತಿ ತಿಂಗಳು ನಾಲ್ಕು ಕಾರ್ಯಕ್ರಮದಂತೆ ನಡೆಯಲಿದೆ" ಎಂದು ಕುಲಪತಿ ತಿಳಿಸಿದರು.

ಈ ಬಗ್ಗೆ ವಿಶ್ವವಿದ್ಯಾಲಯವು ಮೈಸೂರು ಆಕಾಶವಾಣಿಯಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಸಮಕಾಲೀನ, ಸ್ಪರ್ಧಾತ್ಮಕ ಮತ್ತು ಗುಣಮಟ್ಟದ ವಿವಿಧ ಪದವಿಯನ್ನು ಮನೆ ಮನೆಗೆ ತಲುಪಿಸುವ ಧ್ಯೇಯೋದ್ದೇಶಕ್ಕೆ ಪೂರಕವಾಗಿ ಈ ಕಾರ್ಯಕ್ರಮ ನಡೆಯಲಿದೆ. ಮುಕ್ತ ವಿವಿ ತನ್ನೆಲ್ಲ ಶೈಕ್ಷಣಿಕ ಚಟುವಟಿಕೆಯನ್ನು ಕೇಳುಗರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲಿದೆ ಎಂದರು.

ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಅಕಾಡೆಮಿಕ್ ಡೀನ್ ಪ್ರೊ.ಎನ್.ಲಕ್ಷ್ಮೀ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಸುದ್ದಿಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ: ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ: ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದ ಕೆಇಎ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.