ETV Bharat / state

ರಾಜ್ಯದಲ್ಲಿ ಒಬ್ಬರು ದಲಿತ ಸಿಎಂ ಆಗಿಲ್ಲ ಎನ್ನುವ ಕೊರಗು ಇದೆ : ಆರ್. ಧ್ರುವನಾರಾಯಣ್ - ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸುದ್ದಿಗೋಷ್ಠಿ

ಸಹಜವಾಗಿ ಒಬ್ಬ ಹಿರಿಯ ನಾಯಕರು ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ. ಅವರು ಸಾಕಷ್ಟು ಬಾರಿ ಸಿಎಂ ಆಗಬೇಕಿತ್ತು ಆಗ ಬಹುಮತ ಬರಲಿಲ್ಲ. ನಾವೆಲ್ಲಾ ಸಿಎಂ ಹುದ್ದೆ ಆಸೆ ಪಟ್ಟವರಲ್ಲ. ಪಕ್ಷದಲ್ಲಿ ಕಾರ್ಯಾಧ್ಯಕ್ಷದಂತಹ ದೊಡ್ಡ ಹುದ್ದೆ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದರು.

KPCC President R. Dhruvanarayan news conference
ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸುದ್ದಿಗೋಷ್ಠಿ
author img

By

Published : Jul 3, 2021, 4:23 PM IST

ಮೈಸೂರು : ದಲಿತ ಸಿಎಂ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಬ್ಯಾಟಿಂಗ್ ಮಾಡಿದ್ದಾರೆ. ಜಲದರ್ಶಿನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇರೋದು ನಿಜ.

ದಲಿತರಲ್ಲಿ ಅರ್ಹತೆ, ಸಿನಿಯಾರಿಟಿ ಎಲ್ಲಾ ಮುಖ್ಯ. ನನಗೆ ತಿಳಿದಂತೆ ನಮ್ಮ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡಮಟ್ಟದಲ್ಲಿದ್ದಾರೆ. ಸಹಜವಾಗಿ ಒಬ್ಬ ಹಿರಿಯ ನಾಯಕರು ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ. ಅವರು ಸಾಕಷ್ಟು ಬಾರಿ ಸಿಎಂ ಆಗಬೇಕಿತ್ತು, ಆಗ ಬಹುಮತ ಬರಲಿಲ್ಲ. ನಾವೆಲ್ಲಾ ಸಿಎಂ ಹುದ್ದೆ ಆಸೆ ಪಟ್ಟವರಲ್ಲ. ಪಕ್ಷದಲ್ಲಿ ಕಾರ್ಯಾಧ್ಯಕ್ಷದಂತಹ ದೊಡ್ಡ ಹುದ್ದೆ ಸಿಗುತ್ತೆ ಅಂತಾ ಅಂದುಕೊಂಡಿರಲಿಲ್ಲ ಎಂದರು.

ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸುದ್ದಿಗೋಷ್ಠಿ

ದಲಿತ ಮುಖ್ಯಮಂತ್ರಿ ಕೂಗು ಅಪ್ರಸ್ತುತ. ಕಾಂಗ್ರೆಸ್ ದಲಿತರಿಗೆ ಕೊಟ್ಟಷ್ಟು ಅವಕಾಶಗಳನ್ನ ಯಾವ ಪಕ್ಷವೂ ಕೊಟ್ಟಿಲ್ಲ. ಕೇಂದ್ರದಲ್ಲಿ ಸಂಪುಟ ಪುನರ್‌ ‌ರಚನೆ ಆಗುತ್ತಿದೆ. ಐದು ಮಂದಿ ದಲಿತ ಸಂಸದರಿದ್ದಾರೆ, ಬಿಜೆಪಿ ಯಾಕೆ ಸಚಿವರನ್ನಾಗಿ ಮಾಡ್ತಿಲ್ಲ. ಕಾಂಗ್ರೆಸ್ ಖರ್ಗೆ ಪರಾಜಿತರಾದರೂ ರಾಜ್ಯಸಭೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದೆ.

ಮುನಿಯಪ್ಪಗೆ ಸಚಿವ ಸ್ಥಾನ ಕೊಟ್ಟಿದೆ. ಜಿ.ಪರಮೇಶ್ವರ್​ ರಾಜ್ಯದಲ್ಲಿ ಡಿಸಿಎಂ ಆದರು. ಹಿಂದೆ ಸಿಎಂ ಆಗುವ ಅವಕಾಶ ದಲಿತರಿಗೆ ಇತ್ತು. 2008ರಲ್ಲಿ ಬಹುಮತ ಬಂದಿದ್ರೆ ಮಲ್ಲಿಕಾರ್ಜುನ್‌ ಖರ್ಗೆ ಅವರು ಸಿಎಂ ಆಗುತ್ತಿದ್ದರು. 2013ರಲ್ಲಿ ಪರಮೇಶ್ವರ್‌ ಗೆದ್ದಿದ್ರೆ, ಪರಮೇಶ್ವರ್-ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಹಂಚಿಕೆ ಆಗುತ್ತಿತ್ತು ಎಂದು ಹೇಳಿದರು.

ಕಾಂಗ್ರೆಸ್ ಯಾವತ್ತು ದಲಿತರಿಗೆ ಅನ್ಯಾಯ ಮಾಡಿಲ್ಲ. ದಲಿತರಲ್ಲಿ ನಮ್ಮವರು ಸಿಎಂ ಆಗಲಿಲ್ಲ ಎಂಬ ಕೊರಗು ಇದೆ, ಅದಂತೂ ನಿಜ. ಸಮಯ ಸಂದರ್ಭ ಬಂದಾಗ ಅವಕಾಶ ಸಿಗುತ್ತೆ. ಸಾಮಾಜಿಕ ನ್ಯಾಯ ಕೊಟ್ಟಿರೋದೆ ಕಾಂಗ್ರೆಸ್. ಎಲ್ಲಾ ಸಮಾಜದವರಿಗೂ ಅವಕಾಶ ಸಿಕ್ಕಿದೆ.

ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ತೀರ್ಮಾನಿಸಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಕೇವಲ 1800 ಮತಗಳ ಅಂತರದಿಂದ ಸೋತಿದ್ದೇನೆ. ಮುಂದಿನ ಗುರಿ ಲೋಕಸಭಾ ಚುನಾವಣೆ. ಆಕಾಂಕ್ಷಿ ಅಷ್ಟೇ, ಅಭ್ಯರ್ಥಿಯೂ ನಾನೇ ಅಲ್ಲ. ಕಾಂಗ್ರೆಸ್‌ನಲ್ಲಿ ಬಿ‌ಫಾರಂ‌ ಸಿಕ್ಕಾಗಲೇ ಗ್ಯಾರಂಟಿ ಎಂದರು.

ಇದನ್ನೂ ಓದಿ : ಬಿಜೆಪಿ ಪಾಳಯ ಸೇರಿರುವ 17 ಶಾಸಕರಿಗೆ ಮತ್ತೆ ಆಹ್ವಾನ ನೀಡಿದ್ರೇ ಡಿಕೆಶಿ.. ಅವರು ಹೇಳಿದ್ದಿಷ್ಟೇ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.