ETV Bharat / state

ಮೈಸೂರು ದಸರಾ: ತುಲಾ ಲಗ್ನದಲ್ಲಿ ಗಜಪೂಜೆ, ಪುರೋಹಿತರೊಂದಿಗೆ ಸಂದರ್ಶನ - ವೀರನಹೊಸಳ್ಳಿ ಬಳಿ ಗಜಪೂಜೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಇಂದು 9:30ರ ತುಲಾ ಲಗ್ನದಲ್ಲಿ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದ್ದು, ಇಂದು ನಡೆದ ಧಾರ್ಮಿಕ ಕೈಕಂರ್ಯಗಳ ಬಗ್ಗೆ ಪುರೋಹಿತರು ವಿವರಿಸಿದರು.

gajapooja for dasara celebration
ತುಲಾ ಲಗ್ನದಲ್ಲಿ ಗಜಪೂಜೆ
author img

By

Published : Sep 13, 2021, 5:40 PM IST

ಮೈಸೂರು: ನಾಡಹಬ್ಬ ದಸರಾಗೆ ಆಗಮಿಸಿದ ಗಜಪಡೆಗೆ ತುಲಾ ಲಗ್ನದಲ್ಲಿ ಇಂದು ಬೆಳಿಗ್ಗೆ ವೀರನಹೊಸಳ್ಳಿ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಪುರೋಹಿತರಾದ ಪ್ರಹ್ಲಾದ್ ರಾವ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ಇದನ್ನೂ ಓದಿ:ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ

ವೀರನಹೊಸಳ್ಳಿಯ ಬಳಿ ಗಜಪಡೆಗೆ ವಿಶೇಷ ಪೂಜೆಯನ್ನು ಸಾಂಪ್ರದಾಯಿಕವಾಗಿ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಕೈಂಕರ್ಯಗಳ ಬಗ್ಗೆ ಪುರೋಹಿತರಾದ ಪ್ರಹ್ಲಾದ್ ರಾವ್ ಅವರು ವಿವರಿಸಿದ್ದು ಹೀಗೆ.

ಗಜಪೂಜೆ ವೇಳೆ ನಡೆದ ಧಾರ್ಮಿಕ ಕೈಂಕರ್ಯಗಳ ಬಗ್ಗೆ ಮಾಹಿತಿ

ಬೆಳಿಗ್ಗೆ 9.20 ರಿಂದ 10.20ರೊಳಗಿನ ತುಲಾ ಲಗ್ನದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊದಲು ಗಣಪತಿ ಹೋಮ ಮಾಡಲಾಯಿತು. ಗಣಪತಿಯ ಪ್ರತ್ಯಕ್ಷ ರೂಪವಾದ ಗಜಪಡೆಗೆ, ದಸರಾದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಾರುವ ಆನೆಗಳಿಗೆ ವೀರನಹೊಸಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಿನ ಹೆಬ್ಬಾಗಿಲಿನಲ್ಲಿ ನಿಲ್ಲಿಸಿ ಆನೆಗಳಿಗೆ ಪಾದ ತೊಳೆದು, ಪಾದಕ್ಕೆ ಅರಿಶಿಣ, ಕುಂಕುಮ, ಅಕ್ಷತೆ, ಗಂಧಪತ್ರವನ್ನು ಹಚ್ಚಿ ವಿಶೇಷ ಪೂಜೆ ಮಾಡಿ ಗಣಪತಿಗೆ ಇಷ್ಟವಾದ ಚಕ್ಕುಲಿ, ಕೋಡು ಬಳೆ ವಿವಿಧ ಭಕ್ಷ್ಯಗಳನ್ನು ಮಾಡಿ ಪಂಚ ಫಲಗಳನ್ನು ಇಟ್ಟು ನೈವೇದ್ಯ ಮಾಡಿ ಚಾಮರ ಬೀಸಿ ವಿಶೇಷವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು ಎಂದು ಪುರೋಹಿತರಾದ ಪ್ರಹ್ಲಾದ್ ರಾವ್ ಅವರು ವಿವರಿಸಿದರು.

ಇದನ್ನೂ ಓದಿ:ದಸರಾ - 2021: ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಗೆ ಸ್ವಾಗತ

ಸೆಪ್ಟೆಂಬರ್ 16 ರಂದು ಬೆಳಿಗ್ಗೆ 6.30ಕ್ಕೆ ಅರಣ್ಯಭವನದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ 8.30 ರಿಂದ 9.30ರ ಶುಭ ಲಗ್ನದಲ್ಲಿ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಗುವುದು ಎಂದು ಪುರೋಹಿತರು ಇಂದು ಗಜಪಯಣದ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.