ಮೈಸೂರು: ಕೊರೊನಾ ಹಾಟ್ ಸ್ಪಾಟ್ ಆಗಿರುವ ಜುಬಿಲಂಟ್ ಕಾರ್ಖಾನೆ ಪುನರಾರಂಭಿಸಲು ಅವರು ನಂಜನಗೂಡಿನಲ್ಲಿ ಆಗಿರುವ ನಷ್ಟ ಭರಿಸಬೇಕು. ಆಗ ಮಾತ್ರ ಕಾರ್ಖಾನೆ ಪ್ರಾರಂಭಿಸಲು ನಾವು ಒಪ್ಪಿಕೊಳ್ಳುತ್ತೇವೆ ಎಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಜುಬಿಲಂಟ್ ಕಾರ್ಖಾನೆಗೆ ಸೋಂಕು ಎಲ್ಲಿಂದ ಬಂತು ಎಂದು ಹರ್ಷಗುಪ್ತ ನೇತೃತ್ವದ ತಂಡದಿಂದ ತನಿಖೆ ನಡೆಯುತ್ತಿದ್ದು, ಈ ತನಿಖೆ ಏನಾದರೂ ಆಗಲಿ. ಕಳೆದ ಒಂದು ತಿಂಗಳಿನಿಂದ ಜಿಲ್ಲಾಡಳಿತಕ್ಕೆ 6-7 ಕೋಟಿ ರೂ. ನಷ್ಟವಾಗಿದೆ. ಈ ನಷ್ಟವನ್ನು ಕಂಪನಿಯವರು ಭರಿಸುವುದಾದರೆ ಕಾರ್ಖಾನೆ ಪ್ರಾರಂಭಿಸಬೇಕು.
ಜುಬಿಲಂಟ್ ಕಾರ್ಖಾನೆ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ 10 ಕೋಟಿ ರೂ. ನೀಡಿದ್ದಾರೆ. ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಕಂಪನಿ ಪುನರಾರಂಭಕ್ಕೆ ಮುಂದಾದರೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿರುವಷ್ಟು ಹಣವನ್ನು ನಂಜನಗೂಡಿಗೂ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಕಳೆದ ಒಂದು ತಿಂಗಳಿನಿಂದ ನಂಜನಗೂಡಿನಲ್ಲಿ ವ್ಯಾಪಾರದಿಂದ ಹಿಡಿದು ಎಲ್ಲಾದ್ರಲ್ಲೂ ನಷ್ಟವಾಗಿದೆ. ಈ ನಷ್ಟವನ್ನು ಕಂಪನಿಯವರು ಭರಿಸಬೇಕು. ಈ ಬಗ್ಗೆ ಕಂಪನಿಯ ಮುಖ್ಯಸ್ಥರು, ಸಂಸದರ ಸಮ್ಮುಖದಲ್ಲಿ ಸಭೆ ಮಾಡುತ್ತೇವೆ. ಅವರು ನಷ್ಟ ಭರಿಸಲು ಒಪ್ಪಿದ್ರೆ ಮಾತ್ರ ಕಾರ್ಖಾನೆಯ ಆರಂಭಕ್ಕೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಇಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದ್ರು.