ಮೈಸೂರು: ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತೀನಿ ಎಂದು ಹೇಳುತ್ತಿರುವುದು ಮಾಧ್ಯಮಗಳಲ್ಲಿ ಬರುವ ವಿಚಾರ ಅಷ್ಟೇ. ಅದು ಅವರ ಭಾವೋದ್ವೇಗದ ಮಾತುಗಳು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿಯವರನ್ನು ನಾನು ಕರೆದುಕೊಂಡು ಬಂದಿದ್ದೆ. ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕು ಅಂತ ಕೇಳಿದ್ದಾರೆ ಅಷ್ಟೇ. ಸದ್ಯ ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಲ್ಲವೂ ಬಗೆಹರಿದಿದೆ ಎಂದರು. ಆರ್ಎಸ್ಎಸ್ಗೆ ಸಂಬಂಧಪಟ್ಟ ಯಾವುದೇ ಭಿನ್ನಮತೀಯ ಶಾಸಕರು ನಮ್ಮ ಮನೆಗೆ ಬಂದಿಲ್ಲ. ಯಾವುದೇ ಚರ್ಚೆ ಕೂಡ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಅಮೂಲ್ಯ, ಆರ್ದ್ರಾ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಪ್ರತಿಕ್ರಿಯೆ:
ಈಗಾಗಲೇ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಂಡಿದ್ದಾರೆ. ನಮ್ಮ ದೇಶದ ಅನ್ನ ತಿಂದು, ನೀರು, ಗಾಳಿ ಸೇವಿಸಿ ಪಾಕ್ ಪರ ಯಾರೇ ಘೋಷಣೆ ಕೂಗಿದ್ರೂ ಅದು ಅಕ್ಷಮ್ಯ ಅಪರಾಧ. ಯಾರೇ ದೇಶ ವಿರೋಧಿ ಕೃತ್ಯ ಎಸಗಿದ್ರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಬೆಂಗಳೂರಿಗೆ ಹತ್ತಿರವಾಗಿರುವ ನಗರ ಮೈಸೂರು. ಮೈಸೂರು ಜಿಲ್ಲೆಯಲ್ಲೂ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ. ಎರಡನೇ ದರ್ಜೆಯ ನಗರಗಳಿಗೂ ಹೂಡಿಕೆದಾರರನ್ನು ಸೆಳೆಯಲಾಗುತ್ತೆ. ಮೈಸೂರಿನ ಫಾಲ್ಕಾನ್ ಕೈಗಾರಿಕೆ ಬಗ್ಗೆ ಸಹ ಮಾಹಿತಿ ತೆಗೆದುಕೊಳ್ತೀನಿ. ಮೈಸೂರಿನಲ್ಲೂ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಹೆಚ್ಚು ಒತ್ತು ಕೊಡುತ್ತೇನೆ. ಮೈಸೂರು ಅಷ್ಟೇ ಅಲ್ಲ, ಚಾಮರಾಜನಗರ ಸೇರಿದಂತೆ ಎಲ್ಲ ನಗರಗಳಿಗೂ ಆದ್ಯತೆ ಕೊಡ್ತೀವಿ.ಗ್ಲೋಬಲ್ ಇನ್ವೆಸ್ಟ್ ಮೀಟ್ ನವೆಂಬರ್ ನಲ್ಲಿ ಮಾಡುವ ಕುರಿತು ನಿರ್ಧರಿಸುವುದಾಗಿ ತಿಳಿಸಿದ್ರು.
ದಾವೋಸ್ಗೆ ಹೋಗಿದ್ದಾಗ ಹೂಡಿಕೆದಾರರ ಜತೆ ಚರ್ಚೆ ಮಾಡಿದ್ದೇವೆ ಎಂದರು. ಮುಂಬೈನಲ್ಲಿ ಟಾಟಾ, ಮಹೀಂದ್ರಾ ಇತ್ಯಾದಿ ಕಂಪನಿ ಮಾಲೀಕರ ಜತೆ ಚರ್ಚೆ ಮಾಡಿದ್ದೇವೆ. ಅವರು ನಮಗೆ ಸಹಕಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.