ETV Bharat / state

ಮೋದಿ ಸರ್ಕಾರದ ಅಕ್ಕಿಯಲ್ಲಿ ಸಿದ್ದರಾಮಣ್ಣನ ಜಾತ್ರೆನಾ?: ಸಂಸದ ಪ್ರತಾಪ್ ಸಿಂಹ - ಸಂಸದ ಪ್ರತಾಪ್​ ಸಿಂಹ

ಕಾಂಗ್ರೆಸ್​ನ ಉಚಿತ ಯೋಜನೆಗಳು ಗಂಡನನ್ನು ದರೋಡೆ ಮಾಡಿ ಪತ್ನಿಗೆ ಕೊಡುವಂತಿದೆ ಎಂದು ಸಂಸದ ಪ್ರತಾಪ್​ ಸಿಂಹ ವ್ಯಂಗ್ಯವಾಡಿದರು.

MP Prathap Simha
ಸಂಸದ ಪ್ರತಾಪ್​ ಸಿಂಹ
author img

By

Published : Jun 19, 2023, 3:29 PM IST

Updated : Jun 19, 2023, 4:02 PM IST

ಬಿಜೆಪಿ ಸಂಸದ ಪ್ರತಾಪ್​ ಸಿಂಹ ಹೇಳಿಕೆ

ಮೈಸೂರು: ಮೋದಿಯವರು ಅಕ್ಕಿ ಕೊಡಬೇಕು, ನೀವು ಚುನಾವಣೆಯಲ್ಲಿ ಗೆದ್ದು ಬರಬೇಕಾ?, ಓಪನ್ ಮಾರ್ಕೆಟ್​ನಲ್ಲಿ ಅಕ್ಕಿ ಖರೀದಿಸಿ. ಅಕ್ಕಿ ಖರೀದಿ ಆಗದಿದ್ದರೆ ಅಕ್ಕಿಯ ಹಣವನ್ನು ಗಂಡನ ಅಕೌಂಟ್​ಗೆ ಹಾಕಿ ಎಂದು ಹೇಳಿದ ಸಂಸದ ಪ್ರತಾಪ್ ಸಿಂಹ, ಮೋದಿ ಸರ್ಕಾರದ ಅಕ್ಕಿಯಲ್ಲಿ ಸಿದ್ದರಾಮಣ್ಣನ ಜಾತ್ರೆನಾ? ಎಂದು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ರಾಜ್ಯದ ಬಿಜೆಪಿಯವರು ಒತ್ತಡ ತರಲಿ ಎಂಬ ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟರು.

ಇಂದು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರ್ಕಾರ ಎಂದು ಪ್ರಥಮ ಬಾರಿಗೆ ಮುಖ್ಯಮಂತ್ರಿಗಳು ಸತ್ಯ ಹೇಳಿದ್ದಾರೆ. ಮೋದಿಯವರ 5 ಕೆಜಿ ಅಕ್ಕಿಗೆ ನೀವು 5 ಕೆಜಿ ಸೇರಿಸಿ 10 ಕೆಜಿ ಕೊಡಬೇಕು. ಯಾರದೋ ದುಡ್ಡಿನಲ್ಲಿ ಕಾಂಗ್ರೆಸ್ ಜಾತ್ರೆ ಇದು. ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ ಎಲ್ಲೆಡೆ ಚುನಾವಣೆಗೆ ನೀವು ಫ್ರೀ ಅಕ್ಕಿ ಕೋಡೋಕೆ ಆಗುತ್ತಾ? ಮೋದಿಯವರ ಕೈಯಲ್ಲಿ ಅಷ್ಟು ಪ್ರಮಾಣದ ಅಕ್ಕಿಯನ್ನು ಕೊಡಲು ಆಗಿದ್ದರೆ, ನಾವೇ ಅಕ್ಕಿ ಕೊಡುತ್ತಿದ್ದೆವು ಎಂದು ಹೇಳಿದ್ದಾರೆ.

ಅಕ್ಕಿಯನ್ನು ತಯಾರಿಸಲು ಆಗುವುದಿಲ್ಲ. ಮುಂಗಾರು ಕೈ ಕೊಟ್ಟರೆ, ಬರ ಬಂದರೆ, ಜಲ ಪ್ರಳಯವಾದರೆ ಕೇಂದ್ರ ಸರ್ಕಾರ ಏನು ಮಾಡಬೇಕು?, ಆಗ ಆ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡಬೇಕಾಗುತ್ತದೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ಕೊಡುತ್ತಿದೆ. ನೀವು ಅದಕ್ಕೆ 5 ಕೆಜಿ ಸೇರಿಸಿ ಚುನಾವಣೆ ಪ್ರಣಾಳಿಕೆಯಲ್ಲಿ 10 ಕೆಜಿ ಕೊಡುತ್ತೇವೆ ಎಂದು ಹೇಳಿದ್ದೀರಿ. ಈಗ ಅಧಿಕಾರಕ್ಕೆ ಬಂದಿದ್ದೀರಿ, ಈಗ ಅಕ್ಕಿ ಕೊಡಿ. ಇದಕ್ಕೆ ಬಿಜೆಪಿಯವರು ಕೇಂದ್ರದ ಮೇಲೆ ಏಕೆ ಒತ್ತಡ ಹೇರಬೇಕು. ಯಾರದೋ ದುಡ್ಡಿನಲ್ಲಿ ಕಾಂಗ್ರೆಸ್ ಜಾತ್ರೆ ಮಾಡೋದಾ?. ಮೋದಿ ಸರ್ಕಾರದ ಅಕ್ಕಿ ಸಿದ್ದರಾಮಯ್ಯ ಅವರ ಜಾತ್ರೆನಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

ಕರ್ನಾಟಕ ಬಂದ್​ಗೆ ಕೈಜೋಡಿಸಿ: ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯದ ಜನರಿಗೆ ಕೈಗಾರಿಕೋದ್ಯಮಿಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್​ಗೆ ಕೈ ಜೋಡಿಸಿ. ವಿದ್ಯುತ್ ದರ ಯದ್ವಾತದ್ವಾ ಏರಿಕೆಯಾಗಿದೆ. ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಜನರಿಗೆ 200 ಯುನಿಟ್ ವಿದ್ಯುತ್ ಫ್ರೀ ಎಂದು ಹೇಳುವ ಮೂಲಕ ಕೈಗಾರಿಕೋದ್ಯಮಿಗಳಿಗೆ ಬರೆ ಹಾಕುವ ಕೆಲಸ ಆಗುತ್ತಿದೆ. ಉಚಿತ ಯೋಜನೆಗಳು ಒಂಥರಾ ಗಂಡನನ್ನು ದರೋಡೆ ಮಾಡಿ ಪತ್ನಿಗೆ ಕೊಡುವಂತಿದೆ. ನಿಮ್ಮದು ದೋಖಾ ಸರ್ಕಾರ ಎಂದು ಈಗ ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದಿಲ್ಲ: ಸಚಿವ ಮಹಾದೇವಪ್ಪ, ಸಚಿವ ಎಂ.ಬಿ. ಪಾಟೀಲ್ ಇಬ್ಬರು ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಸಿದ್ದರಾಮಯ್ಯ ತಮ್ಮ ಛೇಲಗಳ ಮೂಲಕ ಪೂರ್ಣಾವಧಿಯ ಸಿಎಂ ಎಂದು ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಾವೇ ಪೂರ್ಣಾವಧಿ ಸಿಎಂ ಎಂದು ಹೇಳುವ ಧೈರ್ಯ ಇಲ್ಲ. ಅವರಿಗೆ ಪುಕ್ಕಲುತನ, ಚುನಾವಣೆ ಗೆಲ್ಲಲು ಡಿಕೆಶಿ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದೆ. ಆದರೆ ಸಿದ್ದರಾಮಯ್ಯನವರಿಗೆ ಆ ಧಾರಾಳತನ ಮತ್ತು ಉದಾರತೆಯ ಮನಸ್ಸು ಇಲ್ಲ ಎಂದು ಟೀಕಿಸಿದರು.

ಇದರ ಜೊತೆಗೆ ಸಚಿವ ಎಂ.ಬಿ. ಪಾಟೀಲ್ ಅವರ ಸಂಸದ ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಮಾಡಲಿ ಎಂಬ ಹೇಳಿಕೆಗೆ‌ ತಿರುಗೇಟು ನೀಡಿದ ಸಂಸದ, ಪಾಟೀಲ್​ಗೆ ಈಗ ಸಿಕ್ಕಿರುವ ಖಾತೆ ಬರೀ ಚಿಲ್ಲರೆ ಸಿಗುವ ಖಾತೆ.‌ ಕೂತ ಕೂತಲ್ಲೇ ಕಂತೆ ಕಂತೆ ನೋಟು ಬರುವ ಖಾತೆ ಸಿಗಲಿಲ್ಲ ಎಂದು ವಿಲವಿಲ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನು ಓಲೈಕೆ ಮಾಡುವುದರಲ್ಲೇ ಪಾಟೀಲ್ ನಿರತರಾಗಿದ್ದು, ಸಿದ್ದರಾಮಯ್ಯರ ಬಂದೂಕಿಗೆ ಎಂ.ಬಿ.ಪಾಟೀಲ್ ಹೆಗಲು ಕೊಟ್ಟಿದ್ದಾರೆ ಎಂದು ಟೀಕಿಸಿದರು.

ಸಂತೋಷ್ ಹಾಗೂ ಬ್ರಾಹ್ಮಣರನ್ನು ದಿನಾ ಏಕೆ ಬೈಯುತ್ತೀರಾ. ನಿಮಗೆ ಬ್ರಾಹ್ಮಣರ ಮೇಲೆ ದ್ವೇಷ ಏಕೆ. ನಿಮಗೆ ಬಸವಣ್ಣನವರು ಮೂಲದಲ್ಲಿ ಬ್ರಾಹ್ಮಣರೇ ಅಲ್ಲವೇ, ಬಿ.ಎಲ್. ಸಂತೋಷ್ ಬಗ್ಗೆ ನಿಮಗೆ ಏಕೆ ಸಿಟ್ಟು, ಎಂ.ಬಿ. ಪಾಟೀಲ್ ಅವರೇ ನೀವು ನಿಜವಾಗಿಯೂ ಲಿಂಗಾಯತರೇ, ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ಲವೇ. ಆಗ ನೀವು ಏಕೆ ಸುಮ್ಮನಿದ್ದಿರಿ. ಸಿದ್ದರಾಮಯ್ಯನವರು ಲಿಂಗಾಯತ ಧರ್ಮವನ್ನು ಒಡೆಯಲು ಹೋದಾಗ, ಸುಫಾರಿ ಪಡೆದವರು ನೀವೇ ಅಲ್ಲವೇ. ಈಗ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಎಂದು ಹೇಳುವ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟಿದ್ದೀರಿ. ಇನ್ನೊಂದು ಬಾರಿ ಈ ರೀತಿ ಹೇಳಿಕೆ ಕೊಡಿ, ಡಿ.ಕೆ.ಸುರೇಶ್ ನಿಮ್ಮ ಕೊರಳು ಪಟ್ಟಿ ಹಿಡಿಯುತ್ತಾರೆ ಎಂದು ಎಂಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಶೀಘ್ರವೇ ವಿರೋಧ ಪಕ್ಷದ ನಾಯಕರ ಆಯ್ಕೆ: ಶೀಘ್ರವೇ ವಿರೋಧ ಪಕ್ಷದ ನಾಯಕನ ಆಯ್ಕೆಯಾಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಎಲ್ಲ ಕಡೆ ಕೇಳಿಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಯತ್ನಾಳ್ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಯತ್ನಾಳ್ ಎಂದರೆ ಒಂದು ಹವಾ ಇದೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕರಾಗಲು ಯತ್ನಾಳ್ ಸಮರ್ಥ ವ್ಯಕ್ತಿ ಎಂದು ಯತ್ನಾಳ್ ಪರ ಸಂಸದ ಪ್ರತಾಪ್ ಸಿಂಹ ಬ್ಯಾಟ್ ಬೀಸಿದರು.

ಇದನ್ನೂ ಓದಿ: ದೇವೇಗೌಡರನ್ನೇ ಮಣಿಸಿದ ಸಿದ್ದರಾಮಯ್ಯ ಡಿಕೆಶಿಯನ್ನು ಬಿಡುತ್ತಾರಾ? ಸಿದ್ದು ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಸಿಎಂ ಆಗಲ್ಲ: ಆರ್ ಅಶೋಕ್

Last Updated : Jun 19, 2023, 4:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.