ETV Bharat / state

ನಾಲ್ಕು ವರ್ಷವೂ ಮೈತ್ರಿ ಸರ್ಕಾರ ಸುಭದ್ರ: ಈಶ್ವರ ಖಂಡ್ರೆ ವಿಶ್ವಾಸ

author img

By

Published : Jun 23, 2019, 6:56 PM IST

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ, ನಾಳೆ ಬೀಳುತ್ತೆ ಅಂತೆಲ್ಲಾ ಬಿಜೆಪಿಯವರು ಹೇಳುತ್ತಲೇ ಬರುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ವರ್ಷ ತುಂಬಿದ್ರೂ ಅಧಿಕಾರದಿಂದ ಕೆಳಗಿಳಿದಿಲ್ಲ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮೈಸೂರಿನಲ್ಲಿ ಮಾತನಾಡಿದರು.

ಮೈಸೂರು: ಮುಂದಿನ 4 ವರ್ಷವೂ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಇಂದಿರಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಈಶ್ವರ ಖಂಡ್ರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ, ನಾಳೆ ಬೀಳುತ್ತೆ ಅಂತಾ ಬಿಜೆಪಿಯವರು ಹೇಳುತ್ತಲೇ ಬರುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ವರ್ಷವಾದರೂ ಅಧಿಕಾರದಿಂದ ಕೆಳಗಿಳಿದಿಲ್ಲ ಎಂದು ಅಪರೇಷನ್ ಕಮಲದ ಬಗ್ಗೆ ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರು ಹಾಗೂ ಬಿಜೆಪಿ ಮುಖಂಡರು ಸರ್ಕಾರ ಬೀಳುತ್ತದೆ ಎಂದು ಒಂದು ವರ್ಷ ಕಳೆದರು. ಯಡಿಯೂರಪ್ಪ ಹಗಲು ಕನಸು ಕಾಣುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಖಂಡ್ರೆ ಟೀಕಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರುತ್ತದೆ. ರಾಜ್ಯದ ಯಾವೊಬ್ಬ ಶಾಸಕನಿಗೂ ಮಧ್ಯಂತರ ಚುನಾವಣೆ ಬೇಕಾಗಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದ್ದರೆ, ಬಿಜೆಪಿ ಇಷ್ಟೊಂದು ಸ್ಥಾನ ಗೆಲ್ಲುತ್ತಿರಲಿಲ್ಲ. ಮುಂದಿನ ಚುನಾವಣೆಗಳಲ್ಲಾದರೂ ಬ್ಯಾಲೆಟ್ ಪೇಪರ್​ನಲ್ಲಿ ಮತದಾನ ನಡೆಸುವಂತಾಗಬೇಕು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡಿಲ್ಲ. ಪ್ರಾಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ. ಆದರೂ ಅವರು ಗೆಲುವು ಕಂಡಿರುವುದು ಹೇಗೆ? ಎಂದು ಪ್ರಶ್ನಿಸಿದರು.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಎಂತಹ ಪ್ರಭಾವಿಯೇ ಆಗಿದ್ದರೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

Intro:ಈಶ್ವರ್ ಖಂಡ್ರೆ ಬೈಟ್

Body:ಈಶ್ವರ್ ಖಂಡ್ರೆ ಬೈಟ್

Conclusion:ಸರ್ಕಾರ ಬಂದಾಗಿನಿಂದಲ್ಲೂ ಬೀಳುತ್ತೆ ಅಂತಿದ್ದಾರೆ,ಬಿತ್ತ? ಈಶ್ವರ್ ಖಂಡ್ರೆ
ಮೈಸೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲ್ಲೂ ಈಗ,ಆಗ ಬೀಳುತ್ತೆ,,ನಾಳೆ ಬೀಳುತ್ತೆ ಅಂತಾ ಬಿಜೆಪಿ ಹೇಳುತ್ತಲ್ಲೇ ಬರುತ್ತಿದ್ದಾರೆ,ವರ್ಷವಾದರೂ ಬಿತ್ತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಿಜೆಪಿ ಅಪರೇಷನ್ ಕಮಲಕ್ಕೆ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಾಗೂ ಬಿಜೆಪಿ ಮುಖಂಡರು ಸರ್ಕಾರ ಬೀಳುತ್ತಲೇ ಅಂತಾಲೇ ಒಂದು ವರ್ಷ ಕಳೆದರು.ಯಡಿಯೂರಪ್ಪ ಹಗಲು ಕನಸು ಕಾಣುತ್ತ ಕಳೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇನ್ನು ನಾಲ್ಕು ವರ್ಷ ಸುಭದ್ರವಾಗಿರುತ್ತದೆ.ರಾಜ್ಯದ ಯಾವೊಬ್ಬ ಶಾಸಕನಿಗೂ ಮಧ್ಯಂತರ ಚುನಾವಣೆ ಬೇಕಾಗಿಲ್ಲ ಎಂದು ಹೇಳಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.