ETV Bharat / state

ಮೈಸೂರಿಗೆ ಆಗಮಿಸಿ ತಂದೆ ಹುಟ್ಟುಹಬ್ಬ ಆಚರಿಸಿದ IMF ಪ್ರಥಮ ಉಪಮುಖ್ಯಸ್ಥೆ ಗೀತಾ ಗೋಪಿನಾಥ್ - MF first deputy MD Gita Gopinath in mysore

IMF Deputy Managing Director Geetha Gopinath visits Mysore.. ಐಎಂಎಫ್​ ಪ್ರಥಮ ಉಪ ಮುಖ್ಯಸ್ಥೆ ಗೀತಾ ಗೋಪಿನಾಥ್ ಅವರು ತಮ್ಮ ತಂದೆಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದರು.

imf-first-deputy-md-gita-gopinath-visit-to-mysore
ಮೈಸೂರಿಗೆ ಆಗಮಿಸಿ ತಂದೆ ಹುಟ್ಟುಹಬ್ಬ ಆಚರಿಸಿದ ಐಎಂಎಫ್ ಪ್ರಥಮ ಉಪಮುಖ್ಯಸ್ಥೆ ಗೀತಾ ಗೋಪಿನಾಥ್
author img

By

Published : May 12, 2022, 5:50 PM IST

Updated : May 12, 2022, 6:10 PM IST

ಮೈಸೂರು: ಐಎಂಎಫ್(International Monetary Fund)​ನ ಪ್ರಥಮ ಉಪ ಮುಖ್ಯಸ್ಥೆ ಗೀತಾ ಗೋಪಿನಾಥ್ ತಮ್ಮ ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿಗೆ ಆಗಮಿಸಿ ಸಾಂಪ್ರದಾಯಿಕ ಉಡುಪಿನಲ್ಲಿ ತಂದೆ, ತಾಯಿಯ ಜೊತೆ ಕಾಣಿಸಿಕೊಂಡ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ತಂದೆಯ ಹುಟ್ಟುಹಬ್ಬದ ಸಲುವಾಗಿ ಗೀತಾ ಗೋಪಿನಾಥ್ ಅವರು ತಾಯ್ನಾಡಿಗೆ ಬಂದಿದ್ದು, ಭಾರತೀಯ ಸಂಪ್ರದಾಯದಂತೆ ಸೀರೆ ಧರಿಸಿದ್ದಾರೆ. ಅವರ ತಂದೆ, ತಾಯಿ ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಗೀತಾ ಗೋಪಿನಾಥ್ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಥಮ ಉಪಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಎಂಎಫ್​ನ ಮುಖ್ಯ ಅರ್ಥಶಾಸ್ತ್ರಜ್ಞೆ ಆಗಿದ್ದರು. ಆರ್ಥಿಕ ಕ್ಷೇತ್ರದಲ್ಲಿ ಅವರ ಅನುಭವ ಹಾಗೂ ಚಿಂತನೆಗಳ ಮೂಲಕ ಬಹುಬೇಗ ವಿಶ್ವದ ಗಮನ ಸೆಳೆದಿದ್ದರು. ಆರ್ಥಿಕ ಚೇತರಿಕೆಗೆ ಅವರು ನೀಡಿರುವ ಸಲಹೆಗಳು ಅವರು ಗುರುತಿಸಿಕೊಳ್ಳಲು ಪ್ರಮುಖ ಕಾರಣಗಳಾಗಿವೆ.

ಗೀತಾ ಗೋಪಿನಾಥ್ ತಮ್ಮ ತಂದೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ ಹಾಗೂ ತಾಯಿಯೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗೆ ಟ್ವಿಟರ್​ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 'ಉತ್ಕರ್ಷ್ ಸಮಾರೋಹ್‌: ಫಲಾನುಭವಿಯೊಬ್ಬರ ಪುತ್ರಿ ಜೊತೆ ಸಂವಾದದ ವೇಳೆ ನಮೋ ಭಾವುಕ!

Last Updated : May 12, 2022, 6:10 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.