ETV Bharat / state

ಐಎಂಎ ವಂಚನೆ ಪ್ರಕರಣ ತನಿಖೆಗೆ ಸಿಬಿಐ ಬೇಡ, ನಮ್​​ ಪೊಲೀಸರೇ ಸ್ಟ್ರಾಂಗಿದಾರೆ: ಎಂ.ಬಿ.ಪಾಟೀಲ್​​​​

ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಲ್ಲ. ನಮ್ಮ ಪೊಲೀಸರೇ ಪ್ರಕರಣ ಬೇಧಿಸಲಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

author img

By

Published : Jun 17, 2019, 1:13 PM IST

ಐಎಂಎ ದೋಖಾ ಪ್ರಕರಣಕ್ಕೆ ಸಿಬಿಐ ಬೇಡ

ಮೈಸೂರು: ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ. ನಮ್ಮ ಪೊಲೀಸರೇ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿಲಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್​​​

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎಂಎ ಬಹುಕೋಟಿ ಹಗರಣವನ್ನು ಬಿಜೆಪಿ ಸಿಬಿಐಗೆ ವಹಿಸಿ ಅಂತ ರಾಜಕೀಯ ಮಾಡುತ್ತಿದೆ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ದಾಬೋಲ್ಕರ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಯಾರು ಪ್ರಕರಣ ಬೇಧಿಸಿದರು ಎಂದು ಪ್ರಶ್ನಿಸಿದ್ರು. ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ. ಅವರೇ ಪ್ರಕರಣ ಬೇಧಿಸುತ್ತಾರೆ ಎಂದರು. ಐಎಂಎ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಯಾರನ್ನು ರಕ್ಷಣೆ ಮಾಡುವುದಿಲ್ಲ. ಬಡವರ ದುಡ್ಡು ವಾಪಸ್ ಕೊಡಿಸುತ್ತೇವೆ. ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ ಯೋಚಿಸಿ ಮಾತನಾಡಲಿ ಎಂದರು.

ಶೋಭಾ ಕರಂದ್ಲಾಜೆ ಅವರ ಯೋಗ್ಯತೆ ಹಾಗೂ ನನ್ನ ಯೋಗ್ಯತೆ ರಾಜ್ಯದ ಜ‌ನರಿಗೆ ಗೊತ್ತಿದೆ. ಓರ್ವ ಹೆಣ್ಣುಮಗಳು ಅಂತ ಗೌರವದಿಂದ ಮಾತನಾಡುತ್ತಿದ್ದೀನಿ. ಗೌರವ ಕೊಟ್ಟು ತೆಗೆದುಕೊಳ್ಳುವುದು ಅವರು ಕಲಿಯಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್​ ನೀಡಿದ್ರು.

Intro:ಎಂ.ಬಿ.ಪಿ.ಬೈಟ್Body:ಐಎಂಎ ಪ್ರಕರಣ ಸಿಬಿಐ ವಹಿಸುವುದಿಲ್ಲ, ನಮ್ ಪೊಲೀಸ್ರೆ ಸ್ಟ್ರಾಂಗ್ ಇದ್ದಾರೆ: ಎಂ.ಬಿ.ಪಾಟೀಲ್
ಮೈಸೂರು: ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ,ನಮ್ಮ ಪೊಲೀಸರೇ ಪ್ರಕರಣ ಬೇಧಿಸಲಿದ್ದಾರೆ ಎಂದು ಗೃಹಮಂತ್ರಿ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಐಎಂಎ ಬಹುಕೋಟಿ ಹಗರಣವನ್ನು ಬಿಜೆಪಿ ಸಿಬಿಐ ವಹಿಸಿ ಅಂತ ರಾಜಕೀಯ ಮಾಡುತ್ತಿದ್ದಾರೆ.ಎಂ.ಎಂ.ಕಲಬುರ್ಗಿ, ಗೌರಿಲಂಕೇಶ್, ದಾಬೋಲ್ಕರ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.ಆದರೆ ಯಾರು ಪ್ರಕರಣ ಬೇಧಿಸಿದರು.ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ ಅವರೇ ಪ್ರಕರಣ ಬೇಧಿಸುತ್ತಾರೆ ಎಂದರು.
ಐಎಂಎ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಯಾರನ್ನು ರಕ್ಷಣೆ ಮಾಡುವುದಿಲ್ಲ.ಬಡವರ ದುಡ್ಡು ವಾಪಸ್ ಕೊಡಿಸುತ್ತಿವೆ.ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಮುನ್ನಯೋಚಿಸಿ ಮಾತನಾಡಲಿ ಎಂದರು.
ಶೋಭಾ ಕರಂದ್ಲಾಜೆ ಅವರ ಯೋಗ್ಯತೆ ಹಾಗೂ ನನ್ನಯೋಗ್ಯತೆ ರಾಜ್ಯದ ಜ‌ನರಿಗೆ ಗೊತ್ತಿದೆ.ಓರ್ವ ಹೆಣ್ಣುಮಗಳು ಅಂತ ಗೌರವದಿಂದ ಮಾತನಾಡುತ್ತಿದ್ದಿನಿ.ಗೌರವ ಕೊಟ್ಟು ತೆಗೆದುಕೊಳ್ಳುವುದು ಅವರು ಕಲಿಯಬೇಕಿದೆ ಎಂದರು.Conclusion:ಬೈಟ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.