ಮೈಸೂರು: ಜುಬಿಲಂಟ್ ಕಾರ್ಖಾನೆಗೆ ಮಾಧ್ಯಮದವರು ಯಾರೂ ಬರಲಿಲ್ಲ. ನಾನು ಪ್ರಾಣದ ಹಂಗು ತೊರೆದು ಮೊದಲು ಹೋದೆ. ಅಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ನನಗೆ ಜನಗಣಮನ ಹೇಳುತ್ತಿದ್ರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜುಬಿಲಂಟ್ ಕಾರ್ಖಾನೆಯ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ಮಾಧ್ಯಮದವರ ಮುಂದೆ ಹೇಳಿದರು.
ಗುರುವಾರ ಪ್ರತಿ ಮನೆ ಮನೆಗೂ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು, ನಂಜನಗೂಡು ಪರಿಸ್ಥಿತಿ ಹಾಗೂ ಜುಬಿಲಂಟ್ ಕಾರ್ಖಾನೆಯ ನೌಕರರ ಹಿತ ಮುಖ್ಯ. ಅದಕ್ಕೆ ಮಾಧ್ಯಮದವರು ಯಾರೂ ಬಾರದೆ ಹೋದರು. ನಾನು ನನ್ನ ಜೀವನದ ಹಂಗು ತೊರೆದು ಮೊದಲು ಜುಬಿಲಂಟ್ ಕಾರ್ಖಾನೆಗೆ ಹೋದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ನನಗೆ ಇಷ್ಟೊತ್ತಿಗೆ ಜನಗಣಮನ ಹೇಳಬೇಕಿತ್ತು ಎಂದರು.
ಇದೇ ವೇಳೆ ಸೋಮಣ್ಣ ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಜುಬಿಲಂಟ್ ಕಾರ್ಖಾನೆ ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಅದನ್ನು ಮಾಡಬೇಕು ಎಂದು ಶ್ರೀರಾಮುಲು ಮತ್ತು ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ. ಯಾರೇ ದೊಡ್ಡವರು ಆದರೂ ಕಾನೂನು ಒಂದೇ. ಅದಕ್ಕಿಂತ ಮುಖ್ಯವಾಗಿ ಈಗ ಬಂದಿರುವ ಕಷ್ಟದಿಂದ ನಾವು ಪಾರಾಗಬೇಕಿದೆ. ಆನಂತರ ಏನು ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡೋಣ ಎಂದು ಸೋಮಣ್ಣ ಹೇಳಿದರು.