ETV Bharat / state

ಸಿಎಂ ಪುತ್ರನ ವಿರುದ್ಧದ ಭ್ರಷ್ಟಾಚಾರ ಕುರಿತ ದಾಖಲೆ ದೆಹಲಿಯಲ್ಲಿ ಬಿಡುಗಡೆ ಮಾಡುವೆ : ಎಂ.ಲಕ್ಷ್ಮಣ್

ಸಿಎಂ ಪುತ್ರ ಕಳೆದ 1 ವರ್ಷದಿಂದ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಸೆ.3ನೇ ವಾರದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ಆದರೆ, ದಾಖಲೆ ಬಿಡುಗಡೆ ಮಾಡದಂತೆ ಕೋರ್ಟ್​​ನಿಂದ ಸ್ಟೇ ತರುವ ಪ್ರಯತ್ನ ನಡೆಯುತ್ತಿದೆ. ಆದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ..

i-will-release-the-document-against-cms-son-in-delhi
ಸಿಎಂ ಪುತ್ರನ ವಿರುದ್ಧ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ: ಎಮ್.ಲಕ್ಷ್ಮಣ್
author img

By

Published : Sep 9, 2020, 2:50 PM IST

ಮೈಸೂರು : ಸಿಎಂ‌ ಪುತ್ರನ ವಿರುದ್ಧ ಭ್ರಷ್ಟಾಚಾರದ ಬಗ್ಗೆ ದೆಹಲಿಯಲ್ಲಿ ಸೆ.3ನೇ ವಾರ ದಾಖಲಾತಿ ಬಿಡುಗಡೆ ಮಾಡುತ್ತೇನೆ. ಅದಕ್ಕೂ ಮುನ್ನ ನಾನು ಯಾವುದೇ ಪ್ರೆಸ್‌ಮೀಟ್ ಮಾಡದ ರೀತಿ ಕೋರ್ಟ್​​​ನಿಂದ ಸ್ಟೇ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದ್ದಾರೆ.

ಇಂದು ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಸಿಎಂ ಪುತ್ರ ಬಿ ವೈ ವಿಜಯೇಂದ್ರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಂದ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಲಕ್ಷ್ಮಣ್ ಹಾಗೂ ಮಂಜುಳಾ ‌ಮಾನಸ ವಿರುದ್ಧ ಕೇಸ್ ದಾಖಲಾಗಿದೆ.

ಈಟಿವಿ ಭಾರತ ಜತೆಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಕೇಸ್ ದಾಖಲಿಸಿರುವ ವ್ಯಕ್ತಿಗೂ, ನನಗೂ ಯಾವುದೇ ಸಂಬಂಧವಿಲ್ಲ. ಈ‌ ಬಗ್ಗೆ ಹೈಕೋರ್ಟ್​​​ನಲ್ಲಿ ನಾವು ಕೇಸ್ ಹಾಕುತ್ತೇವೆ. ಇದರ ಜೊತೆಗೆ ನನ್ನ ವಿರುದ್ಧ ಇರುವ ಯಾವುದಾದರೂ ಪ್ರಕರಣಗಳ ಬಗ್ಗೆ ಮೈಸೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಪರಿಶೀಲನೆ ನಡೆಸುವಂತೆ ಬೆಂಗಳೂರಿನಿಂದ ಸೂಚನೆ ನೀಡಲಾಗಿದೆ ಎಂದು ಲಕ್ಷ್ಮಣ್ ಆರೋಪಿಸಿದರು‌.

ಸೆ.3ನೇ ವಾರ ದೆಹಲಿಯಲ್ಲಿ ದಾಖಲೆ ಬಿಡುಗಡೆ : ಸಿಎಂ ಪುತ್ರ ಕಳೆದ 1 ವರ್ಷದಿಂದ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಸೆ.3ನೇ ವಾರದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ಆದರೆ, ದಾಖಲೆ ಬಿಡುಗಡೆ ಮಾಡದಂತೆ ಕೋರ್ಟ್​​ನಿಂದ ಸ್ಟೇ ತರುವ ಪ್ರಯತ್ನ ನಡೆಯುತ್ತಿದೆ. ಆದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಈಗಾಗಲೇ ಕನ್ನಡದಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಕೆಲಸ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಅವ್ಯವಹಾರವನ್ನು ಬಹಿರಂಗ ಪಡಿಸುವ ಕೆಲಸ ಕೈಬಿಡುವುದಿಲ್ಲ.

ಈ ವಿಚಾರದಲ್ಲಿ ಹೈಕಮಾಂಡ್​​​ನಿಂದ ಅನುಮತಿ ಸಹ ಪಡೆದಿದ್ದೇನೆ. ದೊಡ್ಡ ಮಟ್ಟದಲ್ಲಿ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.