ETV Bharat / state

ಗ್ರಾ.ಪಂ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ: ಜಿ.ಟಿ.ದೇವೇಗೌಡ - mysore MLA GT Devegowda

ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

GT Devegowda
ಜಿ.ಟಿ.ದೇವೇಗೌಡ
author img

By

Published : Dec 13, 2020, 5:34 PM IST

ಮೈಸೂರು: ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೂ ಹೋಗಲ್ಲ, ಹುಣಸೂರಿಗೂ ಹೋಗುವುದಿಲ್ಲ‌ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರವಷ್ಟೇ ಜೆಡಿಎಸ್ ಪಕ್ಷದಿಂದ ಹುಣಸೂರು ಕ್ಷೇತ್ರದ ಉಸ್ತುವಾರಿ ನೇಮಕ ಮಾಡಲಾಗಿತ್ತು. ಈ ವಿಚಾರವು ಕೂಡ ಪಕ್ಷದ ಮೂಲಗಳಿಂದ ತಿಳಿದಿಲ್ಲ. ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಭೆಗೂ ಹಾಜರಾಗಲ್ಲ ಹಾಗೂ ಸಭೆಗೂ ಆಹ್ವಾನ ನೀಡಿಲ್ಲ‌ ಎಂದು ಪ್ರತಿಕ್ರಿಯೆ ನೀಡಿದರು.

ಗ್ರಾ.ಪಂ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವ ಚುನಾವಣೆಯಲ್ಲ. ಈ ಕಾರಣಕ್ಕಾಗಿ ನಾನು ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ಹೆಚ್.ಡಿ ಕುಮಾರಸ್ವಾಮಿ ಅವರೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನನಗೆ ಹುಣಸೂರು ಕ್ಷೇತ್ರ ಪರಿಚಯವಿರುವ ಕಾರಣ ನನಗೆ ಉಸ್ತುವಾರಿ ವಹಿಸಿರಬಹುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.