ETV Bharat / state

ಬಿಜೆಪಿ ಸಹವಾಸ ಸಾಕು, ನಾನು ಕಾಂಗ್ರೆಸ್​ ಸೇರುತ್ತೇನೆ: ಸಂದೇಶ್ ನಾಗರಾಜ್ - ಈಟಿವಿ ಭಾರತ ಕನ್ನಡ

ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ನನಗೆ ಬಿಜೆಪಿ ಸಹವಾಸ ಸಾಕು. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.

i-will-join-congress-says-former-mlc-sandesh-nagaraj
ಜೆಪಿ ಪಕ್ಷದ ಸಹವಾಸ ಸಾಕು, ನಾನು ಕಾಂಗ್ರೆಸ್​ ಸೇರುತ್ತೇನೆ : ಸಂದೇಶ್ ನಾಗರಾಜ್
author img

By

Published : Dec 12, 2022, 5:39 PM IST

ಮೈಸೂರು: ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ನನಗೆ ಬಿಜೆಪಿ ಸಹವಾಸ ಇನ್ನು ಸಾಕು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ. ಬಿಜೆಪಿಯಲ್ಲಿ ನಾನು ಸಕ್ರಿಯನಾಗಿಲ್ಲ. ನನ್ನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಮೊದಲು ವಿಶ್ವನಾಥ್​​ಗೆ ಅನ್ಯಾಯ ಮಾಡಿದರು. ಈಗ ನನಗೆ. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪ ರಾಜಕೀಯವನ್ನು ಮುಗಿಸಿದರು: ಒಳ್ಳೆತನದಲ್ಲೇ ಬಿಜೆಪಿಯವರು ಯಡಿಯೂರಪ್ಪನವರ ರಾಜಕೀಯವನ್ನು ಮುಗಿಸಿದರು. ಆಗ ಬಿಜೆಪಿಗೆ 40 ಸ್ಥಾನ ನಷ್ಟವಾಯಿತು. ಈಗ ವಿಜಯೇಂದ್ರ ಅವರನ್ನು ಬಲಿ ಕೊಡಲು ವರುಣಾಗೆ ಕರೆತರುತ್ತಿದ್ದಾರೆ. ಬಿಜೆಪಿಯವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯೋಜನೆ ಹಾಕಿದ್ದಾರೆ. ಈ ಬಗ್ಗೆ ವಿಜಯೇಂದ್ರ ಎಚ್ಚೆತ್ತುಕೊಂಡು ಶಿಕಾರಿಪುರದಲ್ಲೆ ಸ್ಪರ್ಧಿಸಲಿ. ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿಯ ಹತ್ತಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್​ಗೆ ಸೇರುತ್ತಾರೆ ಎಂದರು.

ಕಳೆದ ಬಾರಿ ಸಂದೇಶ್ ನಾಗರಾಜ್ ಜೆಡಿಎಸ್​​ನ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿ ಜೆಡಿಎಸ್​ನಿಂದ ಟಿಕೆಟ್​​ಗೆ ಪ್ರಯತ್ನಿಸಿದ್ದು ಟಿಕೆಟ್​​ ಸಿಗದೇ ಬಿಜೆಪಿ ಸೇರಿದ್ದರು. ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಎಲೆಕ್ಷನ್‌ಗೂ ಮೊದಲೇ ಪ್ರಾಮಿಸ್ ಪಾಲಿಟಿಕ್ಸ್: ಗೆಳೆಯನ ಪರ ತೆಲ್ಕೂರ ಮತಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.