ಮೈಸೂರು:ಅಧಿಕಾರ ಹಂಚಿಕೆಯ ಬಗ್ಗೆ ನನ್ನನ್ನು ಕರೆದು ಮಾತನಾಡಿಲ್ಲ. ಈ ಬಗ್ಗೆ ಹೈಕಮಾಂಡ್ ಹಾಗೂ ಸಿಎಂ ಅವರ ಬಳಿ ಹೋಗಿ ಕೇಳಿ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಹೇಳಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹದೇವಪ್ಪ ಹಾಗೂ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ ಟಿ.ದೇವೇಗೌಡ ಮೈಸೂರು ತಾಲೂಕು ಕಚೇರಿಯಲ್ಲಿ ಸಾಗುವಳಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಉಸ್ತುವಾರಿ ಸಚಿವ ಎಚ್ ಸಿ. ಮಹದೇವಪ್ಪ ಹಾಗೂ ಜೆಡಿಎಸ್ ಶಾಸಕ ಜಿ ಟಿ.ದೇವೇಗೌಡ ಮಾಧ್ಯಮಗಳಿಗೆ ಹೀಗೆ ಹೇಳಿದರು.
ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹದೇವಪ್ಪ ಹೇಳಿದ್ದಿಷ್ಟು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಾಧ್ಯಮಗಳಿಗೆ ನಾನೇ ಸಿಎಂ ಆಗಿ ಮುಂದುವರೆಯುವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಮಹದೇವಪ್ಪ, ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, 5 ವರ್ಷ ಅಂಬಾರಿ ಹೊತ್ತ ಆನೆ ತರಹ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಧಿಕಾರ ಹಂಚಿಕೆಯ ಬಗ್ಗೆ ನನ್ನನ್ನು ಕರೆದು ಯಾರು ಮಾತನಾಡಿಲ್ಲ. ಈ ಬಗ್ಗೆ ಹೈ ಕಮಾಂಡ್ ಹಾಗೂ ಸಿಎಂ ಬಳಿ ಹೋಗಿ ಕೇಳಿ ಎಂದು ಸಚಿವರು ಉತ್ತರ ನೀಡಿದರು.
ಸಿದ್ದರಾಮಯ್ಯ ಕುರ್ಚಿ ವಿಚಾರ ಬಿಟ್ಟು ಬರದ ಕಡೆ ಗಮನಹರಿಸಲಿ:ಜಿ ಟಿ. ದೇವೇಗೌಡ: ಸಿದ್ದರಾಮಯ್ಯ ಸಿಎಂ ಕುರ್ಚಿ ವಿಚಾರ ಬಿಟ್ಟು ಬರ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲಿ. ಅವರು 2013 ರಲ್ಲಿ ಇದೇ ಪರಿಸ್ಥಿತಿ ಇತ್ತು. ಈಗಲೂ ಇದೆ. ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತೇನೆ ಎಂದು ಡಿ ಕೆ.ಶಿವಕುಮಾರ್ ಎಲ್ಲಿಯೂ ಹೇಳಿಲ್ಲ. ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ವಾಸ್ತವ ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಕುರ್ಚಿ ವಿಚಾರ ಬಿಟ್ಟು ಬರಗಾಲದ ಕಡೆ ಗಮನಹರಿಸಲಿ ಎಂದು ಹೇಳಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಜನ ಈಗಾಗಲೇ ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಆದರೆ ಯಾವೊಬ್ಬ ಸಚಿವರು ಇತ್ತ ಗಮನಹರಿಸುತ್ತಿಲ್ಲ, ಬರ ಪರಿಹಾರಕ್ಕಾಗಿ ಸಭೆ ನಡೆಸುತ್ತಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಶಾಸಕ ಜಿ ಟಿ.ದೇವೇಗೌಡ ಒತ್ತಾಯಿಸಿದರು.
ಇದನ್ನೂಓದಿ:'ಬರ'ದ ಬರೆ ಮಧ್ಯೆ ರಾಜ್ಯಕ್ಕೆ ಮತ್ತೊಂದು ಕಂಟಕ: ಕೇಂದ್ರ ಸಹಾಯಾನುದಾನ ಬಿಡುಗಡೆಯಲ್ಲಿ ಭಾರಿ ಕುಸಿತ!