ETV Bharat / state

ವಿವಾಹೇತರ ಸಂಬಂಧದ ಅನುಮಾನ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ - Murder in Mysuru

ಮೈಸೂರಿನಲ್ಲಿ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿ ಪತಿಯೇ ಕೊಲೆಗೈದಿರುವ ಘಟನೆ ನಡೆದಿದೆ.

ಪತ್ನಿ ಕೊಂದು ಪೋಲಿಸರಿಗೆ ಶರಣಾದ ಪತಿ
ಪತ್ನಿ ಕೊಂದು ಪೋಲಿಸರಿಗೆ ಶರಣಾದ ಪತಿ
author img

By ETV Bharat Karnataka Team

Published : Jan 3, 2024, 6:43 PM IST

ಮೈಸೂರು : ವಿವಾಹೇತರ ಸಂಬಂಧದ ಅನುಮಾನದ ಮೇಲೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಮೆಟಗಳ್ಳಿ ಬಳಿ ನಡೆದಿದೆ. ಕೊಲೆ ಮಾಡಿದ ಬಳಿಕ ಪತಿ ತಾನಾಗೆ ಬಂದು ಮೇಟಗಳ್ಳಿ ಪೋಲಿಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾನಾಗಿದ್ದಾನೆ. ಕೊಲೆಯಾದವರನ್ನು ಕಾವೇರಿ ಗಡಾಯಿ (40) ಎಂದು ಗುರುತಿಸಲಾಗಿದೆ. ಆರೋಪಿ ಪ್ರಮೋದ್ ಕುಮಾರ್ ಪೊಲೀಸರ ವಶದಲ್ಲಿದ್ದಾನೆ.

ಕಳೆದ ಆರು ತಿಂಗಳ ಹಿಂದೆ ಹರಿಯಾಣದಿಂದ ಪ್ರಮೋದ್ ಕುಮಾರ್ ದಂಪತಿ ಮೇಟಗಳ್ಳಿಯಲ್ಲಿ ಬಂದು ನೆಲೆಸಿದ್ದರು. ಖಾಸಗಿ ಕಾರ್ಖಾನೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಪ್ರಮೋದ್ ಕುಮಾರ್ ಜನಾ (43) ತನ್ನ ಪತ್ನಿ ಒಡಿಶಾ ಮೂಲದ ಕಾವೇರಿ ಗಡಾಯಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸುತ್ತಿದ್ದನು. ಆಗಾಗ್ಗೆ ಈ ವಿಚಾರವಾಗಿ ಆಕೆಯೊಂದಿಗೆ ಜಗಳ ಸಹ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಸಹ ಇದೇ ವಿಚಾರವಾಗಿ ಪತ್ನಿ ಕಾವೇರಿಯೊಂದಿಗೆ ಜಗಳ ಶುರು ಮಾಡಿದ್ದ ಪ್ರಮೋದ್​ ಚಾಕುವಿನಿಂದ ಮನಸೋಯಿಚ್ಛೆ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಒಡಿಶಾದಿಂದ ಸಂಬಂಧಿಕರು ಬಂದ ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ನೀಡಲಾಗುವುದು ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಮುತ್ತುರಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರು: ರೈಲ್ವೆ ಹಳಿಯಲ್ಲಿ ಶಾಲಾ ವಾಹನ ಚಾಲಕ ಮತ್ತು ವಿದ್ಯಾರ್ಥಿನಿಯ ಶವ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.