ಮೈಸೂರು: ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಇಂದು ಸಿದ್ದರಾಮಯ್ಯ ಅಧಿಕೃತವಾಗಿ ಅಖಾಡಕ್ಕಿಳಿಯಲಿದ್ದು, ಇಂದು ಹುಣಸೂರಿನ 16 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ತಮ್ಮ ಕಟ್ಟಾ ಬೆಂಬಲಿಗ, ಹುಣಸೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಪರವಾಗಿ ಬೆಳಗ್ಗಿನಿಂದ ಸಂಜೆ 6 ಗಂಟೆವರೆಗೂ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಹುಣಸೂರಿನಲ್ಲಿ ವಾಸ್ತವ್ಯ ಹೂಡಿರುವ ಶ್ರೀ ರಾಮುಲು
ಇತ್ತ ಬಿಜೆಪಿ ಕೂಡ ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದು, ಸಚಿವ ಶ್ರೀರಾಮುಲು ಅವರಿಗೆ ಇಲ್ಲಿನ ಉಸ್ತುವಾರಿ ನೀಡಿದೆ. ಕಳೆದ ೨ ದಿನಗಳಿಂದ ಸಚಿವ ಶ್ರೀ ರಾಮುಲು ಹುಣಸೂರಿನಲ್ಲೇ ವಾಸ್ತವ್ಯ ಹೂಡಿದ್ದು, ತಮ್ಮ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಯ ಮುಖಂಡರನ್ನು ಭೇಟಿಯಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇಲ್ಲಿ ಸಿದ್ದರಾಮಯ್ಯ ವಿರುದ್ಧ ಬಾದಾಮಿಯ ಸೋಲಿನ ಹಗೆ ತೀರಿಸಿಕೊಳ್ಳಲು ಚುನಾವಣಾ ತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿಗೆ ಇತ್ತೀಚೆಗೆ ಮರು ಸೇರ್ಪಡೆಯಾದ ಸಿ.ಹೆಚ್ ವಿಜಯ್ ಶಂಕರ್ ಅವರು ಶ್ರೀರಾಮುಲು ಅವರಿಗೆ ಸಾಥ್ ನೀಡಿದ್ದಾರೆ.