ETV Bharat / state

ಬಾಗಿಲು ಮುಚ್ಚಿದ ಸಿನಿಮಾ ನಟರ ಅಚ್ಚುಮೆಚ್ಚಿನ ಹೋಟೆಲ್​​​​​​​​​​​​ 'ರಮ್ಯ'

ಈ ಹೋಟೆಲ್​ನಲ್ಲಿ ದೋಸೆ ಹಾಗೂ ಬಾದಾಮಿ ಹಲ್ವಾ ತುಂಬಾ ಪ್ರಸಿದ್ಧಿ ಪಡೆದಿತ್ತು‌. ನಟರು ಹಾಗೂ ರಾಜಕಾರಣಿಗಳು ಮೈಸೂರಿಗೆ ಬಂದಾಗ ರಮ್ಯ ಹೋಟೆಲ್​ಗೆ ಭೇಟಿ ಅಲ್ಲಿನ ರುಚಿ ಸವಿಯುತ್ತಿದ್ದರು.

Hotel Ramya
ಹೊಟೇಲ್​ 'ರಮ್ಯಾ'
author img

By

Published : Jun 29, 2020, 3:16 PM IST

ಮೈಸೂರು: ಮೈಸೂರು ನಗರಕ್ಕೆ ಬಂದ ಸಿನಿಮಾ ನಟರು ಹಾಗೂ ರಾಜಕಾರಣಿಗಳು ತಪ್ಪದೇ ಭೇಟಿ ನೀಡುತ್ತಿದ್ದ ರಮ್ಯ ಹೋಟೆಲ್ ಲಾಕ್​ಡೌನ್ ನಷ್ಟದಿಂದ ಬಂದ್ ಆಗಿದೆ.

ಬಾಗಿಲು ಮುಚ್ಚಿದ ಸಿನಿಮಾ ನಟರ ಅಚ್ಚುಮೆಚ್ಚಿನ ಹೋಟೆಲ್​​​​ 'ರಮ್ಯಾ

ನಗರದಲ್ಲಿ ಕಳೆದ 40 ವರ್ಷಗಳಿಂದ ರಾಜಕಾರಣಿಗಳು ಹಾಗೂ ಚಲನಚಿತ್ರ ನಟರು ಭೇಟಿ ನೀಡಿ ಇಲ್ಲಿನ ದೋಸೆ ಹಾಗೂ ಬಾದಾಮಿ ಹಲ್ವಾ ಸವಿದು ಹೋಗುತ್ತಿದ್ದರು. ಈ ಹೋಟೆಲ್ ಜೆ.ಎಲ್.ಬಿ ರಸ್ತೆಯ ಮೂಡಾ ಕಚೇರಿಯ ಹಿಂಭಾಗದಲ್ಲಿರುವ ಕಾಸ್ಮೋ ಪಾಲಿಟಿನ್ ಕಬ್ಲ್ ಜಾಗವನ್ನು ಗುತ್ತಿಗೆ ಪಡೆದು 40 ವರ್ಷದ ಹಿಂದೆ ರಮ್ಯ ಹೋಟೆಲ್​​ ಅನ್ನು ಆರಂಭಿಸಿದರು. ನಂತರ 2002 ರಲ್ಲಿ ಸಿದ್ದಪ್ಪ ವೃತ್ತದಲ್ಲಿರುವ ಜೋಡಿ ಟ್ಯಾಂಕ್ ಬಳಿ ಪ್ರಾರಂಭಿಸಲಾಯಿತು. ಈಗ ಕಾರ್ಮಿಕರ ಕೊರತೆ, ಹೆಚ್ಚಾದ ಬಾಡಿಗೆ ದರದಿಂದ ಮಾಲೀಕರು ಈ ಹೋಟೆಲ್ ಅನ್ನು ನಿನ್ನೆ ಸಂಜೆ ಕೊನೆ ದಿನ ಓಪನ್ ಮಾಡಿ ಬಂದ್ ಮಾಡಿದರು.

Hotel Ramya
ಪ್ರಸಿದ್ಧಿ ಪಡೆದ ಬಾದಾಮಿ ಹಲ್ವಾ

ಈ ಹೋಟೆಲ್​ನಲ್ಲಿ ದೋಸೆ ಹಾಗೂ ಬಾದಾಮಿ ಹಲ್ವಾ ತುಂಬಾ ಪ್ರಸಿದ್ಧಿ ಪಡೆದಿತ್ತು‌. ನಟರು ಹಾಗೂ ರಾಜಕಾರಣಿಗಳು ಮೈಸೂರಿಗೆ ಬಂದಾಗ ರಮ್ಯ ಹೋಟೆಲ್​ಗೆ ಭೇಟಿ ಅಲ್ಲಿನ ರುಚಿಯನ್ನು ಸವಿಯುತ್ತಿದ್ದರು. ಮೈಸೂರಿಗೆ ಬಂದಾಗ ರಮ್ಯ ಹೋಟೆಲ್​ಗೆ ತಪ್ಪದೇ ಭೇಟಿ ನೀಡುತ್ತಿದ್ದವರು ದಿವಂಗತ ಅಂಬರೀಶ್.

ಇವರು ಈ ಹೋಟೆಲ್​ನಲ್ಲಿ ತಿಂಡಿ ತಿಂದು, ಬಾದಾಮಿ ಹಲ್ವಾವನ್ನು ತಪ್ಪದೆ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಇವರ ಜೊತೆಗೆ ಡಾ.ರಾಜ್ ಕುಮಾರ್, ರಾಕ್​​​ಲೈನ್ ವೆಂಕಟೇಶ್, ನಟ ರಮೇಶ್ ಅರವಿಂದ್ ಸೇರಿದಂತೆ ಹಲವಾರು ನಟರು ಇಲ್ಲಿಗೆ ಭೇಟಿ ನೀಡಿ ಇಲ್ಲಿನ ದೋಸೆ, ಉಪ್ಪಿಟ್ಟು , ಇಡ್ಲಿ ರುಚಿಕರವಾದ ಬಾದಾಮಿ ಹಲ್ವಾದ ರುಚಿ ನೋಡಿದ್ದಾರೆ.

Hotel Ramya
ಹೋಟೆಲ್​ಗೆ ಭೇಟಿ ನೀಡಿದ ಗಣ್ಯರು

ಇನ್ನು ಈ ಹೋಟೆಲ್​ಗೆ ಬಂದಾಗ ತಪ್ಪದೇ ಭೇಟಿ ನೀಡುತ್ತಿದ್ದವರು ಮಾಜಿ ಮುಖ್ಯಮಂತ್ರಿ ಎಸ್​​​ ಬಂಗಾರಪ್ಪ, ಸಿದ್ದರಾಮಯ್ಯ ಇಲ್ಲಿಗೆ ಬಂದು ತಿಂಡಿ ತಿಂದು ಹೋಗುತ್ತಿದ್ದರು. ಇವರ ಜೊತೆಗೆ ಸಚಿವ ಆರ್.ಅಶೋಕ್ , ಸಚಿವ ಈಶ್ವರಪ್ಪ , ಬಿ.ಸಿ ಪಾಟೀಲ್ ಸೇರಿದಂತೆ ಪ್ರತಿಯೊಬ್ಬ ರಾಜಕಾರಣಿಗಳು ಮೈಸೂರಿಗೆ ಬಂದಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರು ಎಂದು ಮಾಲೀಕರಾದ ಮಹೇಂದ್ರ ತಿಳಿಸಿದ್ದಾರೆ

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಲು ಬಯಸದ ಇವರು ಕೊರೊನಾ ಲಾಕ್​ಡೌನ್​ನಿಂದ ನಷ್ಟವಾಗಿದೆ. ಸದ್ಯಕ್ಕೆ ಈ ಹೋಟೆಲ್​​​​​ ಮುಚ್ಚುತ್ತಿದ್ದೇನೆ, ಮುಂದಿನ ವರ್ಷ ಪರಿಸ್ಥಿತಿ ಬದಲಾದರೆ ಓಪನ್ ಮಾಡುವ ಬಗ್ಗೆ ಚಿಂತಿಸುತ್ತೇನೆ ಎನ್ನುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.