ETV Bharat / state

ದಸರಾ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್​​​ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ - ಮೈಸೂರಿನಲ್ಲಿ ಆರಗ ಜ್ಞಾನೇಂದ್ರ ಹೇಳಿಕೆ

ಪೊಲೀಸರಿಗೆ ಸಮನ್ಸ್ ಜಾರಿ ಹೊರೆಯಾಗುತ್ತಿದೆ. ಅಂಚೆ ಇಲಾಖೆ ನೆರವಿನೊಂದಿಗೆ ಸಮನ್ಸ್ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ಕ್ರೈಮ್ ಕನ್ವಿಕ್ಷನ್ ಪ್ರಮಾಣ ಜಾಸ್ತಿಯಾಗಬೇಕಿದೆ. 2021ರಲ್ಲಿ 37.77ರಷ್ಟು ಕ್ರೈಮ್ ಕನ್ವಿಕ್ಷನ್ ಪ್ರಮಾಣವಿದೆ. ಎಫ್ಐಆರ್ ಹಾಕಿ ಚಾರ್ಜ್ ಶೀಟ್ ಸಲ್ಲಿಸಿದರೆ ಸಾಲದು, ಸಾಕ್ಷಿಗಳ ಮನವೊಲಿಸಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳುವಂತೆ ಮಾಡಿ ಅಪರಾಧಿಗಳಿಗೆ ಶಿಕ್ಷಯಾಗುವಂತೆ ಮಾಡಬೇಕು..

ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

author img

By

Published : Sep 28, 2021, 6:22 PM IST

ಮೈಸೂರು : ದಸರಾ ಮಹೋತ್ಸವ ಸಮೀಪಿಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಯಾದ ಭದ್ರತೆ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇಂದು ಜಲದರ್ಶಿನಿ ಅತಿಥಿಗೃಹದಲ್ಲಿ ಮಾತನಾಡಿದ ಅವರು, ವಿದೇಶಿಗರು ಮೈಸೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆಯೇ ಎಂಬ ಬಗ್ಗೆ ‌ಮಾಹಿತಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಮೈಸೂರು ಪ್ರಮುಖ ಪ್ರವಾಸಿ ತಾಣ. ದಸರಾ ಮಹೋತ್ಸವ ಸಮೀಪಿಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುವಂತೆ ಹಾಗೂ ಸೂಕ್ತ ಭದ್ರತೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಮಾದಕ ಜಾಲ ; 3 ವರ್ಷ, 61 ಕೇಸ್, 104 ಮಂದಿ ಬಂಧನ

ನಗರದಲ್ಲಿ ಮಾದಕ ವಸ್ತುಗಳ ಜಾಲ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 61 ಕೇಸ್ ದಾಖಲಿಸಲಾಗಿದ್ದು, 104 ಜನರನ್ನು ಬಂಧಿಸಲಾಗಿದೆ. ಹುಕ್ಕಾ ಬಾರ್ ಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಯುವಕರು ಹಾಗೂ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೊಲೀಸರಿಗೆ ಹೆಚ್ಚು ರೈಡ್ ಮಾಡಲು ಸೂಚಿಸಿದ್ದೇನೆ ಎಂದರು.

ಪೊಲೀಸರಿಗೆ ಸಮನ್ಸ್ ಜಾರಿ ಹೊರೆಯಾಗುತ್ತಿದೆ. ಅಂಚೆ ಇಲಾಖೆ ನೆರವಿನೊಂದಿಗೆ ಸಮನ್ಸ್ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ಕ್ರೈಮ್ ಕನ್ವಿಕ್ಷನ್ ಪ್ರಮಾಣ ಜಾಸ್ತಿಯಾಗಬೇಕಿದೆ. 2021ರಲ್ಲಿ 37.77ರಷ್ಟು ಕ್ರೈಮ್ ಕನ್ವಿಕ್ಷನ್ ಪ್ರಮಾಣವಿದೆ. ಎಫ್ಐಆರ್ ಹಾಕಿ ಚಾರ್ಜ್ ಶೀಟ್ ಸಲ್ಲಿಸಿದರೆ ಸಾಲದು, ಸಾಕ್ಷಿಗಳ ಮನವೊಲಿಸಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳುವಂತೆ ಮಾಡಿ ಅಪರಾಧಿಗಳಿಗೆ ಶಿಕ್ಷಯಾಗುವಂತೆ ಮಾಡಬೇಕು ಎಂದರು.

ಈಗಾಗಲೇ ಪೊಲೀಸರು ಗಸ್ತು ವ್ಯವಸ್ಥೆ ಮಾಡಿದ್ದಾರೆ. ಆದರೆ, ಇನ್ನು ಹೆಚ್ಚು ವ್ಯಾಪಕವಾಗಿ ಗಸ್ತು ವ್ಯವಸ್ಥೆಯಾಗಬೇಕು. 250 ಮಂದಿ‌ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗಬೇಕೆಂದು ಸೂಚನೆ ನೀಡಿದ್ದೇನೆ ಎಂದರು.

100 ಪೊಲೀಸ್ ಠಾಣೆಗಳ ನಿರ್ಮಾಣ

ಪೊಲೀಸ್ ಠಾಣೆಗಳು ಬಾಡಿಗೆ ಕಟ್ಟಡದಲ್ಲಿ ಹೆಚ್ಚಾಗಿವೆ. ಆದ್ದರಿಂದ ರಾಜ್ಯದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಸ್ವಂತ ಕಟ್ಟಡವಿಲ್ಲದ 13 ಪೊಲೀಸ್ ಠಾಣೆಗಳು ಮಾತ್ರ ಉಳಿದುಕೊಳ್ಳುತ್ತವೆ. ಇದೇ ವೆಚ್ಚದಲ್ಲಿ ಆ ಠಾಣೆಗಳಿಗು ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ. 4 ವರ್ಷದ ಹಿಂದೆ 33 ಸಾವಿರ ಹುದ್ದೆಗಳು ಖಾಲಿ ಇದ್ದವು. ಆದರೆ, ಈಗ 16 ಸಾವಿರ ಹುದ್ದೆಗಳು ಖಾಲಿ ಇವೆ. ಈ ಬಾರಿ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 2 ವರ್ಷದಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ನಗರದಲ್ಲಿ 134 ಕಾನ್ಸ್‌ಟೇಬಲ್​​ಗಳ ಹುದ್ದೆ ಖಾಲಿ ಇವೆ. ಈ ಬಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಅಲ್ಲದೇ ಶೇ.25ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 36 ಮಹಿಳಾ ಪೊಲೀಸ್ ಠಾಣೆಗಳಿವೆ. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಪ್ರತಿ ಠಾಣೆಯಲ್ಲಿ 3 ಮಂದಿ ಮಹಿಳಾ ಕಾನ್ಸ್‌ಟೇಬಲ್ ಇರಬೇಕೆಂದು ಆದೇಶಿಸಲಾಗಿದೆ.

ಅಲ್ಲದೇ ಮಹಿಳೆಯರು ಹಾಗೂ ಯುವತಿಯರ ಹಿತದೃಷ್ಟಿಯಿಂದ ಪ್ರತಿ ಠಾಣೆಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದೆ. ಯುವತಿಯರು ಹಾಗೂ ವಿದ್ಯಾರ್ಥಿಗಳಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ‌ ಮೇಲಿನ ದೌರ್ಜನ್ಯ ತಡೆಗಟ್ಟುವುದು ಸರ್ಕಾರದ ಪ್ರಮುಖ ಆದ್ಯತೆ ಎಂದರು.

ಆರೋಪಿಗಳಿಗೆ ಶಿಕ್ಷೆ ಕೊಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯದ ಪಾತ್ರ ಮಹತ್ವದ್ದಾಗಿದೆ. ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಪ್ರಮುಖವಾಗಿದೆ. ಈ ಕಾರಣದಿಂದಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ 250 ಮಂದಿ ಸಿಬ್ಬಂದಿ ನೇಮಕವನ್ನು ಮಂಜೂರಾತಿಗಾಗಿ ನೀಡಿದ್ದೇವೆ ಎಂದರು.

ಪೊಲೀಸ್ ಸಿಬ್ಬಂದಿಗೆ 10 ಸಾವಿರ ಮನೆ ಅನುಷ್ಠಾನ

ಪ್ರಸ್ತುತ ಶೇ.49ರಷ್ಟು ಪೊಲೀಸರಿಗೆ ಮನೆ ನೀಡಲಾಗಿದೆ. ಪೊಲೀಸ್ ಸಿಬ್ಬಂದಿಗೆ 10 ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಮ‌ಕೈಗೊಳ್ಳಲಾಗಿದೆ. ‌ಈಗಾಗಲೇ ರಾಜ್ಯದಲ್ಲಿ ಜೂಜಾಡುವುದನ್ನು ನಿಲ್ಲಿಸಲು ಕಾಯ್ದೆ ಜಾರಿಗೆ ತರಲಾಗಿದೆ. ಹಣ ಇಟ್ಟು ಆಡುವ ಎಲ್ಲಾ ಜೂಜುಗಳನ್ನು ನಿಷೇಧಿಸಲಾಗಿದೆ. ಬೆಟ್ಟಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ ಮಾಡಲು ವೆಬ್ ಸೈಟ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಇದರ ಮಾಹಿತಿ ಸೈಬರ್ ಪೊಲೀಸರಿಗೆ ಇದೆ ಎಂದರು.

ಸದ್ಯದಲ್ಲಿಯೇ ಮತಾಂತರ‌ ನಿಷೇಧ ಕಾಯ್ದೆ ಜಾರಿ

ಸದ್ಯದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತದೆ. ‌ಅವರವರ ಧರ್ಮದಲ್ಲಿ ಅವರು ಬದುಕಬೇಕು. ಮತಾಂತರ ಮಾಡುವುದು ತಪ್ಪು. ಈ ಹಿನ್ನೆಲೆ ವಿವಿಧ ಕಾಯ್ದೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.