ಮೈಸೂರು: ದೇವಸ್ಥಾನ ಒಡೆದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದವರು, ಹಿಂದೂ ತಾಲಿಬಾನಿಗಳು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ದನಿ ಎತ್ತದ ಕೆಲವರು, ದೇಗುಲ ಒಡೆದಿದ್ದನ್ನು ವಿರೋದಿಸಿ ಪ್ರತಿಭಟನೆ ನಡೆಸಯವ ಮೂಲಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಮಹಿಷಾ ದಸರಾ ಬಗ್ಗೆ ಮಾತನಾಡಿ ನಕಲಿ ದೇಶಭಕ್ತರು ಮಹಿಷಾ ದಸರಾ ವಿರೋಧಿಸುತ್ತಿದ್ದಾರೆ. ಇವರ ವಿರೋಧಕ್ಕೆ ನಾವು ಹೆದರುವುದಿಲ್ಲ. ಮಹಿಷಾ ದಸರಾ ನಡೆಸೇ ನಡೆಸುತ್ತೇವೆ ಎಂದು ಹೇಳಿದರು.
ಚಾಮುಂಡಿ ನಾಡ ದೇವತೆಯಲ್ಲ:
ದಸರಾ ಸಂದರ್ಭದಲ್ಲಿ ಪೂಜಿಸುವ ಚಾಮುಂಡಿ ನಾಡದೇವತೆ ಅಲ್ಲ. ನಾಡಹಬ್ಬ- ಹುಟ್ಟು ಬೆಳವಣಿಗೆ ಕುರಿತು 1962 ರ ದಸರಾ ಸಂಚಿಕೆಯಲ್ಲಿ ವರಕವಿ ಬೇಂದ್ರೆ ಬರೆದ ಲೇಖನದಲ್ಲಿ ನಾಡದೇವತೆ ಭುವನೇಶ್ವರಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜಯನಗರ ಸಂಸ್ಥಾನದವರು ಮಹಾನವಮಿ ಹಬ್ಬದಲ್ಲಿ ಭುವನೇಶ್ವರಿ ದೇವಿಯನ್ನು ಪೂಜಿಸುತ್ತಿದ್ದರು ಎಂದು ತಿಳಿಸಿದರು.
ಚಾಮುಂಡೇಶ್ವರಿ ಮೈಸೂರು ಸಂಸ್ಥಾನಕ್ಕೆ ಸೇರಿದವಳಲ್ಲ. ಚಂಡ- ಮುಂಡರನ್ನು ಸಂಹರಿಸಿ ಅವರ ಹೆಸರನ್ನು ತನಗೆ ಇಟ್ಟುಕೊಳ್ಳುತ್ತಾಳೆ. ಈ ಯುದ್ಧ ನಡೆದಿರುವುದು ಹಿಮಾಲಯದಲ್ಲಿ . ಆದ್ದರಿಂದ ಚಾಮುಂಡೇಶ್ವರಿ ಕರ್ನಾಟಕದವಳು ಹೇಗಾಗುತ್ತಾಳೆ. ಮಹಿಷಾಸುರ ಅವಧಿಯಲ್ಲಿ ಮಾತೃ ಸಂಸ್ಕೃತಿಯಿತ್ತು. ಮಾರಮ್ಮನಿಗೆ ಪೂಜೆ ಸಲ್ಲಿಸುವ ಪದ್ದತಿಯಿತ್ತು. ಮಾರಮ್ಮನ ಪೂಜೆ ಸಲ್ಲಿಸಿದ ಊರು, ಮೈಸೂರಾಗಿ ಬದಲಾಗಿದೆ ಎಂದು ವಿವರಿಸಿದರು.
ಇದನ್ನು ಓದಿ:ಸಿದ್ದರಾಮಯ್ಯಗೆ ದೇವಸ್ಥಾನದ ಬಗ್ಗೆ ಪ್ರೀತಿ ಇದ್ದಿದ್ದರೆ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ: ಪ್ರತಾಪ್ ಸಿಂಹ ತಿರುಗೇಟು