ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇಂದು ಸ್ಫೋಟಗೊಂಡಿದ್ದು, ಜನರು ಭಯಭಿತಗೊಂಡಿದ್ದಾರೆ. ಈ ಕೊರೊನ ಸ್ಫೋಟಕ್ಕೆ ಅಸಲಿ ಕಾರಣ ಏನು ಎಂಬುದನ್ನು ಈಗ ಅಧಿಕಾರಿಗಳು ಹುಡುಕಲು ಆರಂಭಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಇಂದು ಕೊರೊನಾದ ಎರಡನೆ ಅಲೆಯು ಜೊರಾಗಿ ಅಪ್ಪಣಿಸಿದೆ. ಶುಕ್ರವಾರ ಒಂದೇ ದಿನ 3,500 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 13 ಜನ ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 22 ದಿನಗಳಿಂದ 135 ಜನ ಸೋಂಕಿತರು ಸಾವಿಗೀಡಾಗಿದ್ದು, ಕೊರೊನಾದ ತೀವ್ರತೆ ಎಷ್ಟಿದೆ ಎಂಬುದು ಇದರಿಂದ ತಿಳಿಯಲಿದೆ.
ಬೆಂಗಳೂರನ್ನು ಬಿಟ್ಟರೆ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ದಾಖಲಾಗುತ್ತಿದ್ದು, ಸಾವಿನ ಪ್ರಮಾಣವು ಸಹ ಬೆಂಗಳೂರನ್ನು ಬಿಟ್ಟರೆ ಮೈಸೂರಿನಲ್ಲೇ ಅತಿ ಹೆಚ್ಚಾಗಿದೆ.
ಸೋಂಕು ಹೆಚ್ಚಲು ಕಾರಣವೇನು?
ಮೈಸೂರು ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಕ್ರಮವಾಗಿ ಪ್ರತಿ ದಿನ 100 ಪ್ರಕರಣಗಳು ನಂತರ 200, 500, 1000,2000 , ಈಗ 3,500 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ ದಿನ ದುಪ್ಪಟ್ಟು ಆಗುತ್ತಿದ್ದು ಇದಕ್ಕೆ ಕಾರಣ, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಜಿಲ್ಲೆಯಿಂದ ಜೊತೆಗೆ ಬೆಂಗಳೂರಿನಲ್ಲಿ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆ ಬೆಡ್ ಸಿಗದೇ ಮೈಸೂರಿನ ಕಡೆಗೆ ಕೋವಿಡ್ ಸೋಂಕಿತರು ಹೆಚ್ಚಾಗಿ ಬರುತ್ತಿರುವುದು.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಗೊತ್ತಾಗುವ ಹೊತ್ತಿಗೆ ಸೋಂಕಿತರು ಹೆಚ್ಚಾಗಿದ್ದು, ಅವರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ವ್ಯವಸ್ಥೆ ಮಾಡುವ ಕಡೆ ಜಿಲ್ಲಾಡಳಿತ ಉಸ್ತುವಾರಿ ಸಚಿವರು, ತಾಲೂಕು ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ಕೋವಿಡ್ ಸೋಂಕಿತರು ಹೆಚ್ಚಾಗುತ್ತಿದ್ದು, ಈಗ ಇದು ಹಿಡಿತಕ್ಕೆ ಸಿಗದೆ ಪ್ರತಿ ದಿನ ದುಪ್ಪಟ್ಟು ಆಗುತ್ತಿದೆ. ಮೊದಲ ಬಾರಿಗೆ 3500 ಸೋಂಕಿತರು ಪತ್ತೆಯಾಗಿದ್ದು, ಒಂದೇ ದಿನ 13 ಜನರು ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆ ಸಾಂಸ್ಕೃತಿಕ ನಗರಿ ತಲ್ಲಣಗೊಂಡಿದೆ.