ETV Bharat / state

ಮೋದಿ, ಶಾ ಮುಂದೆ ಕೈ ಕಟ್ಟಿ ನಿಂತು ಅವರ ಹೇಳಿದ್ದನ್ನ ಬಿಜೆಪಿ ನಾಯಕರು ಪಾಲಿಸಬೇಕು: ಕುಮಾರಸ್ವಾಮಿ ವ್ಯಂಗ್ಯ

author img

By

Published : Jan 2, 2023, 9:13 PM IST

ಮಾಜಿ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿಗೆ ಕೇಂದ್ರ ನಾಯಕರು ಗೌರವ ನೀಡುತ್ತಿಲ್ಲ-ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ- ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯ

HD Kumaraswamy Satire on bjp leaders
ಮೋದಿ,ಶಾ ಹೇಳಿದ್ದನ್ನ ಬಿಜೆಪಿ ನಾಯಕರು ಪಾಲನೆ ಮಾಡಬೇಕು:ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯ

ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಕೈಕಟ್ಟಿ ನಿಂತು ಅವರು ಹೇಳಿದ್ದನ್ನು ಪಾಲನೆ ಮಾಡಬೇಕಾದ ಸ್ಥಿತಿ ಬಿಜೆಪಿಯ ರಾಜ್ಯ ನಾಯಕರಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಮೈಸೂರಿನ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣಮಂಟದಲ್ಲಿ ನಡೆದ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಶರಣರೊಂದಿಗೆ ಕುಮಾರಣ್ಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ನೀಡುತ್ತಿಲ್ಲ. ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳಿಂದ ರಾಜ್ಯಕ್ಕೆ ಏನೂ ಅನುಕೂಲವಾಗಿಲ್ಲ ಎಂದು ಕಿಡಿಕಾರಿದರು.

ಉಭಯ ಸರ್ಕಾರದಿಂದ ರಾಜ್ಯ ದೊರೆತ ಕೊಡುಗೆ ಏನು? ರಾಜ್ಯದ ಅನೇಕ ವಿಷಯಗಳ ಕುರಿತು ಮನ್ನಣೆ ಕೊಟ್ಟಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡವಳಿಕೆ ಕುರಿತು ಮತದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದರು. 2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ರಚನೆ, ಅಧಿಕಾರ ಹಸ್ತಾಂತರ ಮಾಡದಿದ್ದರಿಂದ ಈ ಸರ್ಕಾರದ ಪತನದ ಕುರಿತು ಲಿಂಗಾಯತ ಸಮುದಾಯಕ್ಕೆ ಸುದೀರ್ಘ ವಿವರಣೆ, ಸ್ಪಷ್ಟನೆ ನೀಡಿದ ಹೆಚ್​ಡಿಕೆ, ಈ ವಿಷಯದಲ್ಲಿ ನನ್ನ ತಪ್ಪು ಇಲ್ಲ. ಬಿಜೆಪಿಗೆ ಅಧಿಕಾರ ಹಸ್ತಾಂತರಕ್ಕೆ ನಾನು ಸಿದ್ಧ ಇದ್ದೆ. ಆದರೆ, ಅದು ಆಗಲಿಲ್ಲ. ಈ ವಿಷಯದಲ್ಲಿ ನನ್ನನ್ನು ಬಲಿ ಪಶು ಮಾಡಲಾಯಿತು. ಆದರೀಗ ಇದೆಲ್ಲ ಮುಗಿದ ಅಧ್ಯಾಯ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು? ರಾಜ್ಯದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆಯಲು ವೀರಶೈವ ಲಿಂಗಾಯತರು ಶಕ್ತಿ ತುಂಬಿದರು. ಈ ಸಮುದಾಯದ ನಾಯಕ ಬಿ ಎಸ್ ಯಡಿಯೂರಪ್ಪ ಎಂಬ ಕಾರಣಕ್ಕೆ ಹೀಗೆ ಮಾಡಿದರು. ಆದರೀಗ ಬಿಎಸ್​ವೈ ಅವರನ್ನೇ ಬಿಜೆಪಿ ಮೂಲೆಗುಂಪು ಮಾಡಿದೆ. ಇವರು ಸಿಎಂ ಆಗಿದ್ದಾಗ ಗೌರವ ಕೊಡಲಿಲ್ಲ. ದೆಹಲಿಗೆ ಭೇಟಿ ನೀಡಿದ್ದಾಗ ಸಮಯ ಕೊಡದೇ 3 ದಿನ ಕಾಲ ಇವರನ್ನು ಕಾಯಿಸಿದ್ದರು. ಇದನ್ನು ಈ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಹಳೇ ಮೈಸೂರು ಪ್ರಾಂತ್ಯದ 6 ಜಿಲ್ಲೆಯ 34 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಮಾಡಿರುವೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪಕ್ಷದ ಪರ ಪೂರಕ ವಾತಾವರಣವಿದೆ. ಈ ಭಾಗದ 33 ಕ್ಷೇತ್ರದಲ್ಲಿ ಜೆಡಿಎಸ್ ಜಯ ದಾಖಲಿಸಲಿದೆ ಎಂಬ ವಿಶ್ವಾಸವಿದೆ ಎಂದರು.

ಈ ಹಿಂದೆ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತ ಸಮುದಾಯದವರು ಒಂದಾಗಿದ್ದರಿಂದ ಜನತಾದಳ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಉದಾಹರಣೆ ರಾಜ್ಯದಲ್ಲಿ ಇದೆ. ಈ ಸಮೀಕರಣ ಮುಂದಿನ ಚುನಾವಣೆಯಲ್ಲಿ ಆಗಬೇಕು. ಅದಕ್ಕಾಗಿ ಎರಡು ಸಮುದಾಯದವರು ಸಹಕಾರ ನೀಡಬೇಕು ಎಂದು ಕೋರಿದರು.

ಈ ವೇಳೆ ಶಾಸಕರಾದ ಜಿ ಟಿ ದೇವೇಗೌಡ, ಸಾ.ರಾ. ಮಹೇಶ್, ಅಶ್ವಿನಿಕುಮಾರ್​, ಎಂಎಲ್ಸಿ ಸಿ.ಎನ್. ಮಂಜೇಗೌಡ ಹಾಗೂ ಪಕ್ಷದ ಮುಖಂಡರು ಇದ್ದರು.

ಇದನ್ನೂ ಓದಿ:ಜೆಡಿಎಸ್ ಕುಟುಂಬದ ಎಟಿಎಂ ಅಲ್ಲ, ರೈತರ ಎಟಿಎಂ: ಹೆಚ್ ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.