ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕಾಗಿ ವಿಶೇಷ ಚೇತನ ಬಾಲಕನೋರ್ವ ಕೂಡಿಟ್ಟ ಗೋಲಕದ ಹಣವನ್ನು ನೀಡಿದ್ದಾನೆ.
ನಗರದಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಮಹದೇವಪುರ ಬಡಾವಣೆಯ ವಿಶೇಷ ಚೇತನ ಬಾಲಕ ಶ್ರೀನಿವಾಸ್, ತಾನು ಸಂಗ್ರಹಿಸಿದ್ದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಿಸಿದ್ದಾನೆ. ಗೋಲಕದ ಹಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯನಿರ್ವಾಹಕ ವೆಂಕಟರಾಮ್ ಅವರಿಗೆ ನೀಡಿ, ರಾಮ ಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಲು ಮನವಿ ಮಾಡಿದ್ದಾನೆ.
ಓದಿ-ಆ್ಯಪ್ ಮೂಲಕ ಏರ್ ಟಿಕೆಟ್ ಬುಕ್ ಮಾಡಿದವನಿಗೆ 7 ಲಕ್ಷ ದೋಖಾ!
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಜೆಎಲ್ಬಿ ರಸ್ತೆಯಲ್ಲಿರುವ ಆರ್ಎಸ್ಎಸ್ ಕಚೇರಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವತಿಯಿಂದ ಭಾನುವಾರ ಸಂಜೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಆರ್ಎಸ್ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬೂತ್ ಮಟ್ಟದಿಂದ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ.