ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಹೆಚ್​ ವಿಶ್ವನಾಥ್​ - Mysuru teachers day

ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಹಲವು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ಸ್ವಪಕ್ಷದ ನೀತಿಯ ವಿರುದ್ಧ ಹೆಚ್​.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.

HVishwanath
ಹೆಚ್. ವಿಶ್ವನಾಥ್
author img

By

Published : Sep 5, 2021, 1:35 PM IST

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತರಲು ಉನ್ನತ ಶಿಕ್ಷಣ ಸಚಿವರು ಏಕಪಕ್ಷೀಯವಾಗಿ, ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ವಪಕ್ಷದವರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವರು ಯಾರ ಗಮನಕ್ಕೂ ತರದೆ, ಪ್ರಾಥಮಿಕ ಶಿಕ್ಷಣ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಂಪುಟದಲ್ಲಿಯೂ ಚರ್ಚೆಗಿಡದೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಹೆಚ್​ ವಿಶ್ವನಾಥ್​

ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರೊಂದಿಗೆ ಕುಳಿತು ಚರ್ಚೆ ಮಾಡಬೇಕು. ಅವಸರದ ಕ್ರಮ ಸರಿಯಲ್ಲ. ಹೊಸ ಶಿಕ್ಷಣ ನೀತಿಯಿಂದ, ಪ್ಲಸ್ ಹಾಗೂ ಮೈನಸ್ ಇದೆ‌. ಸಾಧಕ-ಬಾಧಕಗಳು ಯಾವುದು ಎಂಬುದರ ಬಗ್ಗೆ ಶಿಕ್ಷಣ ತಜ್ಞ, ಶಿಕ್ಷಕರು ಹಾಗೂ ಪೋಷಕರು ಅವರೊಂದಿಗೆ ಸಂವಾದ ಮಾಡಬೇಕು. ಅವಸರವಾಗಿ ಎನ್​ಇಪಿ ಮಾಡಬಾರದು ಎಂದಿದ್ದಾರೆ.

ಭೂ ಅಕ್ರಮಗಳ ಬಗ್ಗೆ ಮತ್ತೆ ಸರ್ವೇ ಮಾಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ವೇ ಮಾಡುವುದು ಬೇಡ ಎನ್ನುವವರು ಯಾರು? ಅಧಿಕಾರಿಗಳು ಅವರ ಕೆಲಸ ಮಾಡಲಿ. ಮನೀಶ್ ಮುದ್ಗಿಲ್ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂದರು.

ಓದಿ: ಸಿಂದಗಿ ಅತ್ಯಾಚಾರ ಪ್ರಕರಣಕ್ಕೆ​ ಟ್ವಿಸ್ಟ್: ತನಿಖಾಧಿಕಾರಿ ನ್ಯಾಮಗೌಡ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.