ಮೈಸೂರು: ಅನರ್ಹ ಶಾಸಕ ಎಚ್.ವಿಶ್ವನಾಥ್ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿದ್ದು, ಇಬ್ಬರು ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ಜಯಲಕ್ಷ್ಮಿಪುರಂನಲ್ಲಿರುವ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಆಗಮಿಸಿದ ವಿಶ್ವನಾಥ್, ರಾಜಕೀಯ ಬೆಳವಣಿಗೆ ಹಾಗೂ ಉಪಚುನಾವಣೆ ಬಗ್ಗೆ ಅರ್ಧಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದರು. ಚರ್ಚೆ ಬಳಿಕ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದು, ವಿಶ್ವನಾಥ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅಲ್ಲದೇ ಇದಕ್ಕೂ ಮೊದಲು ಸಚಿವ ವಿ.ಸೋಮಣ್ಣ ಅವರನ್ನು ಸಹ ಭೇಟಿ ಮಾಡಿ ವಿಶ್ವನಾಥ್ ಚರ್ಚೆ ನಡೆಸಿದ್ದರು. ಈ ಭೇಟಿಗಳು ಮೈಸೂರಿನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.