ETV Bharat / state

ಜಿ.ಟಿ ದೇವೇಗೌಡ - ಸಾ. ರಾ ಮಹೇಶ್ ಗೌಪ್ಯ ಮಾತುಕತೆ : ಹಲವು ವಿಷಯಗಳ ಚರ್ಚೆ ಸಾಧ್ಯತೆ - GT Devegowda S R Mahesh confidential talk regarding election

ವರಿಷ್ಠರ ಸೂಚನೆ ಮೇರೆಗೆ ಶಾಸಕ ಸಾ. ರಾ ಮಹೇಶ್ ಭಾನುವಾರ ಜಲದರ್ಶಿನಿಯಲ್ಲಿರುವ ಶಾಸಕ ಜಿ. ಟಿ ದೇವೇಗೌಡರ ಕಚೇರಿಗೆ ಆಗಮಿಸಿ ಇದೇ ತಿಂಗಳ 31 ರಂದು ಕೆ. ಆರ್ ನಗರದಲ್ಲಿ ನಡೆಯುವ ಕೆಂಪೇಗೌಡ ಜಯಂತಿಗೆ ಆಹ್ವಾನ ನೀಡಿದ್ದಾರೆ. ಆ ಕಾರ್ಯಕ್ರಮಕ್ಕೆ ಜಿಡಿಎಸ್ ವರಿಷ್ಠ ದೇವೇಗೌಡ ಹಾಗೂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಲಿದ್ದು, ಆ ವೇದಿಕೆಯಲ್ಲಿ ಶಾಸಕ ಜಿಟಿಡಿ ಮುನಿಸನ್ನು ವರಿಷ್ಠರ ನೇತೃತ್ವದಲ್ಲಿ ಶಮನ ಮಾಡಿ ಮುಂದಿನ ಚುನಾವಣೆಗೆ ಸಜ್ಜಾಗಲು ತಂತ್ರ ರೂಪಿಸಲಾಗಿದೆ.

ಜಿ. ಟಿ ದೇವೇಗೌಡ - ಸಾ. ರಾ ಮಹೇಶ್ ಗೌಪ್ಯ ಮಾತುಕತೆ

author img

By

Published : Jul 25, 2022, 7:16 PM IST

ಮೈಸೂರು: 2 ವರ್ಷಗಳಿಂದಲೂ ಜೆಡಿಎಸ್​​​ನಿಂದ ದೂರವಿದ್ದ ಶಾಸಕ ಜಿ. ಟಿ ದೇವೇಗೌಡ ಅವರೊಂದಿಗೆ ಶಾಸಕ ಸಾ. ರಾ ಮಹೇಶ್ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದು ಹಲವಾರು ಚರ್ಚೆಗಳನ್ನು ಹುಟ್ಟುಹಾಕಿದ್ದು, ಜಿ. ಟಿ ದೇವೇಗೌಡ ಅವರನ್ನು ಜೆಡಿಎಸ್​ನಲ್ಲೇ ಉಳಿಸಿಕೊಳ್ಳುವ ಮೊದಲ ಪ್ರಯತ್ನ ಎನ್ನಲಾಗಿದೆ. ಹಾಗಾದರೆ, ಈ ಭೇಟಿ ಏನೆಲ್ಲಾ ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಎಂಬುದನ್ನು ನೋಡೋಣ..

ಸಮ್ಮಿಶ್ರ ಸರ್ಕಾರದ ಪತನದ ನಂತರ ಚಾಮುಂಡೇಶ್ವರಿಯ ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡ ಜಿಲ್ಲೆಯಲ್ಲಿ ಜೆಡಿಎಸ್​ನ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದವರನ್ನು ಸೇರುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಜೊತೆಗೆ ಶಾಸಕ ಸಾ. ರಾ ಮಹೇಶ್ ನಡವಳಿಕೆಯಿಂದಲೂ ಸಹ ಜಿಟಿಡಿ ಬೇಸರಗೊಂಡಿದ್ದು, ಹಲವಾರು ಬಾರಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಶಾಸಕ ಸಾ. ರಾ ಮಹೇಶ್ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್​ನ ನಾಯಕತ್ವ ವಹಿಸಿದ್ದು, ಜಿಟಿಡಿ ಕೋಪಕ್ಕೆ ಕಾರಣವಾಗಿತ್ತು.

ನಿನ್ನೆ ಜಿಟಿಡಿ - ಸಾರಾ ಗೌಪ್ಯ ಮಾತುಕತೆ: ವರಿಷ್ಠರ ಸೂಚನೆ ಮೇರೆಗೆ ಶಾಸಕ ಸಾ. ರಾ ಮಹೇಶ್ ಭಾನುವಾರ ಜಲದರ್ಶಿನಿಯಲ್ಲಿರುವ ಶಾಸಕ ಜಿ. ಟಿ ದೇವೇಗೌಡರ ಕಚೇರಿಗೆ ಆಗಮಿಸಿ ಇದೇ ತಿಂಗಳ 31 ರಂದು ಕೆ. ಆರ್ ನಗರದಲ್ಲಿ ನಡೆಯುವ ಕೆಂಪೇಗೌಡ ಜಯಂತಿಗೆ ಆಹ್ವಾನ ನೀಡಿದ್ದಾರೆ. ಆ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಲಿದ್ದು, ಆ ವೇದಿಕೆಯಲ್ಲಿ ಶಾಸಕ ಜಿಟಿಡಿ ಮುನಿಸು ವರಿಷ್ಠರ ನೇತೃತ್ವದಲ್ಲಿ ಶಮನ ಮಾಡಿ ಮುಂದಿನ ಚುನಾವಣೆಗೆ ಸಜ್ಜಾಗಲು ತಂತ್ರ ರೂಪಿಸಲಾಗಿದೆ.

ಜಿಟಿಡಿ ನೇತೃತ್ವದಲ್ಲಿ ಮುಂದಿನ ಚುನಾವಣೆ: ಜಿಲ್ಲೆಯಲ್ಲಿ ಮುಂದಿನ ವಿಧಾನ ಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಜಿ. ಟಿ ದೇವೇಗೌಡ ನೇತೃತ್ವದಲ್ಲಿ ಎದುರಿಸಿದರೆ ಹೆಚ್ಚಿನ ಸ್ಥಾನ ಗೆಲ್ಲುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಜಿಟಿಡಿ ಅವರನ್ನು ಜೆಡಿಎಸ್​ನಲ್ಲೇ ಉಳಿಸಿಕೊಂಡು ಮುಂದಿನ ಚುನಾವಣೆ ನೇತೃತ್ವ ವಹಿಸಲು ತೀರ್ಮಾನಿಸಲಾಗಿದೆ. ಜೊತೆಗೆ ತಂದೆಗೆ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಹಾಗೂ ಮಗ ಜಿ. ಟಿ ಹರೀಶ್ ಗೌಡರಿಗೆ ಹುಣಸೂರು ಕ್ಷೇತ್ರದ ಟಿಕೆಟ್ ನೀಡಲು ಜೆಡಿಎಸ್ ನಿರ್ಧರಿಸಿದೆ.

ಜಿ. ಟಿ ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡರು ಒಲವು ತೋರಿದ್ದು, ಅದರ ಭಾಗವಾಗಿ ನಿನ್ನೆ ಶಾಸಕ ಸಾ. ರಾ ಮಹೇಶ್ ಜಿಟಿಡಿ ಅವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿರುವುದು ಜಿಟಿಡಿಯನ್ನು ಜ್ಯಾತ್ಯತೀತ ಜನತಾ ದಳದಲ್ಲೇ ಉಳಿಸಿಕೊಳ್ಳುವ ಮೊದಲ ಪ್ರಯತ್ನ ಎಂಬ ಮಾತುಗಳು ಕೇಳಿ ಬಂದಿವೆ.

ಓದಿ: ಮುಂದಿನ ಸಿಎಂ ಸಿದ್ದರಾಮಯ್ಯ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ: ಜಮೀರ್ ಅಹ್ಮದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.