ETV Bharat / state

ಮೈಸೂರಿನಲ್ಲಿ ಗೃಹಲಕ್ಷ್ಮಿ ಉದ್ಘಾಟನೆ ಕಾರ್ಯಕ್ರಮ: ವಾಹನ ಸಂಚಾರಕ್ಕೆ ರಸ್ತೆ ಮಾರ್ಗ ಬದಲಾವಣೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ರಸ್ತೆ ಮಾರ್ಗ ಬದಲಾವಣೆ ಮಾಡಿರುವ ಬಗ್ಗೆ ನಗರದ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಪ್ರಕಟಣೆಯಲ್ಲಿ ಹೊರಡಿಸಿದ್ದಾರೆ.

ಗೃಹಲಕ್ಷ್ಮಿ ಉದ್ಘಾಟನೆ ಕಾರ್ಯಕ್ರಮ
ಗೃಹಲಕ್ಷ್ಮಿ ಉದ್ಘಾಟನೆ ಕಾರ್ಯಕ್ರಮ
author img

By ETV Bharat Karnataka Team

Published : Aug 29, 2023, 9:39 PM IST

ಮೈಸೂರು : ಆಗಸ್ಟ್ 30(ಬುಧವಾರ) ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಫಲಾನುಭವಿಗಳು ಆಗಮಿಸಲಿದ್ದು, ಕಾರ್ಯಕ್ರಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ಹೀಗಾಗಿ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ಮತ್ತು ವಾಹನಗಳ ನಿಲುಗಡೆಗೆ ನಿರ್ಬಂಧವನ್ನು ವಿಧಿಸಲು ಹಾಗೂ ಹುಣಸೂರು ಮಾರ್ಗವಾಗಿ ಆಗಮಿಸುವ ಕೆಎಸ್​ಆರ್​ಟಿಸಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗವನ್ನು ಕಲ್ಪಿಸಲಾಗಿದೆ.

ಕೆಎಸ್​ಆರ್​ಟಿಸಿ ಬಸ್‌ಗಳ ಮಾರ್ಗ ಬದಲಾವಣೆ : ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಕೆಎಸ್​ಆರ್​ಟಿಸಿ ಬಸ್‌ಗಳು ಹಿನಕಲ್​ ಫ್ಲೈ ಓವರ್ ಜಂಕ್ಷನ್‌ನಿಂದ -ಎಡ ತಿರುವು -ರಿಂಗ್ ರಸ್ತೆ - ರಾಯಲ್ ಇನ್ ಜಂಕ್ಷನ್ - ಬಲ ತಿರುವು - ಕೆಆರ್​ಎಸ್ ರಸ್ತೆ ಮೂಲಕ ವಿವಿ ಪುರಂ - ಆಕಾಶವಾಣಿ ವೃತ - ದಾಸಪ್ಪ ವೃತ - ಮೇಟ್ರೋಪೋಲ್ ವೃತ್ತ – ಮುಡಾ ವೃತದಿಂದ ಬಲ ತಿರುವು ಪಡೆದು ರಮಾವಿಲಾಸ ರಸ್ತೆ - ಬನುಮಯ್ಯ ಜಂಕ್ಷನ್ - ಬಿ ರಾಜಯ್ಯ ವೃತ - ಪುರಂದರ ರಸ್ತೆ - ಕುಸ್ತಿ ಅಖಾಡ ಜಂಕ್ಷನ್ - ಹಾರ್ಡಿಂಜ್ ವೃತದ ಮೂಲಕ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ತೆರಳುವಂತೆ ತಿಳಿಸಲಾಗಿದೆ.

ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಹುಣಸೂರು ಮಾರ್ಗವಾಗಿ ಚಲಿಸುವ ಬಸ್‌ಗಳು ಇರ್ವಿನ್ ರಸ್ತೆ ಮೂಲಕ - ನೆಹರು ವೃತ - ಆಯುರ್ವೇದಿಕ್ ಕಾಲೇಜು ವೃತ - ರೈಲ್ವೇ ನಿಲ್ದಾಣ ವೃತ - ದಾಸಪ್ಪ ವೃತ - ಆಕಾಶವಾಣಿ ವೃತ - ವಿವಿ ಪುರಂ - ಕೆ,ಆರ್,ಎಸ್ ರಸ್ತೆ ಮೂಲಕ ರಾಯಲ್ ಇನ್ ಜಂಕ್ಷನ್ - ಎಡ ತಿರುವು - ರಿಂಗ್ ರಸ್ತೆ - ಹಿನ್ಕಲ್ ಫ್ಲೈ ಓವರ್ ಜಂಕ್ಷನ್‌ನಿದ ಹುಣಸೂರು ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುವ ಮಾರ್ಗಗಳು : (ಕಾರ್ಯಕ್ರಮಕ್ಕೆ ಆಗಮಿಸುವ ಕೆಎಸ್​ಆರ್​ಟಿಸಿ ಬಸ್‌ಗಳನ್ನು ಹೊರತುಪಡಿಸಿ) ಜಿಲ್ಲಾಧಿಕಾರಿಗಳ ಕಚೇರಿ ಆರ್ಟ್ ಗೇಟ್ ಜಂಕ್ಷನ್​ನಿಂದ ಕೋರ್ಟ್ ಜಂಕ್ಷನ್‌ವರಗೆ ಕೆಆರ್​ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚಾರಿಸುವು ಎಲ್ಲಾ ಮಾದರಿಯ ವಾಗನಗಳ ಸಂಚಾರವನ್ನು ಹಾಗೂ ರಸ್ತೆಯ ಎರಡು ಭಾಗಗಳಲ್ಲೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸೇಂಟ್ ಜೋಸೆಫ್ ಜಂಕ್ಷನ್ ನಿಂದ ಮೇಟ್ರೋ ಪೋಲ್ ವೃತದವರೆಗಿನ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಅಲ್ಲದೆ, ಮುಡ ಜಂಕ್ಷನ್​ನಿಂದ ಬಿಎಂಡಿ ಜಂಕ್ಷನ್ ವರೆಗೆ ರಸ್ತೆ ಹಾಗೂ ರಾಮಸ್ವಾಮಿ ವೃತದಿಂದ ಅಗ್ನಿಶಾಮಕ ಠಾಣೆ ವರೆಗೆ ರಸ್ತೆ, ಕಲಾಮಂದಿರ ಜಂಕ್ಷನ್‌ನಿಂದ ರೈಲ್ವೆ ಗೇಟ್ ಜಂಕ್ಷನ್ ವರೆಗೆ. ಡಾ. ಪದ್ಮಾವೃತದಿಂದ ಚಂದ್ರಮೌಳೇಶ್ವರ ದೇವಸ್ಥಾನ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ಎರಡು ಕಡೆಗಳಲ್ಲಿ, ಸರಸ್ವತಿಪುರಂ ಐದನೇ ಕ್ರಾಸ್ ಜಂಕ್ಷನ್‌ನಿಂದ ಟಿಟಿಎಲ್ ಕಾಲೇಜು ಜಂಕ್ಷನ್‌ವರೆಗೆ, ರಮ್ಯಾ ಹೋಟೆಲ್ ಜಂಕ್ಷನ್‌ನಿಂದ ಕುಕ್ಕರಹಳ್ಳಿ ಗ್ರಾಮದ ಅರಳಿಕಟ್ಟೆ ಜಂಕ್ಷನ್‌ವರೆಗಿನ ಸ್ವಿಮ್ಮಿಂಗ್ ಪೂಲ್ ರಸ್ತೆಯವರೆಗೆ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಹಾಗು ರಸ್ತೆ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ರೋಟರಿ ಜಂಕ್ಷನ್ ನಿಂದ ಕೆ ಆರ್ ಬಿ ರಸ್ತೆ ಜಂಕ್ಷನ್ ವರೆಗೆ ಎರಡು ಕಡೆಗಳಲ್ಲಿ ಸಂಚರಿಸುವ ಹಾಗೂ ಜೆಎಲ್​ಬಿ ಜಂಕ್ಷನ್ ನಿಂದ ಕೆಆರ್​ಬಿ ರಸ್ತೆ ಜಂಕ್ಷನ್ ವರೆಗೆ, ವಿಜಯ ಬ್ಯಾಂಕ್ ವೃತದಿಂದ ವಿಎಂಡಿ ವೃತ್ತದ ಅವರಿಗೆ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬದಲಿ ಮಾರ್ಗವಾಗಿ : ಹಾಸನ - ಮಡಿಕೇರಿ - ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೇಂಟ್ ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವ ಪಡೆದು ಟೆಂಪಲ್ ರಸ್ತೆ- ಬಿಸಿ ಲಿಂಗಯ್ಯ ವೃತ್ತ- ಕೆಆರ್​ಎಸ್ ರಸ್ತೆ ಮೂಲಕ ಹಾಗೂ ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲತಿರುವು ಪಡೆದು ಚದುರಂಗ ರಸ್ತೆ ಮೂಲಕ ಚಾಮರಾಜ ಜೋಡಿ ರಸ್ತೆಯಿಂದ ಆಗಮಿಸುವ ವಾಹನಗಳು ಆರ್​ಟಿಓ ವೃತ್ತದ ಮೂಲಕ ಮತ್ತು ಜೆಎಲ್​ಬಿ ರಸ್ತೆಯಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ, ವಿವಿಪುರಂ ವೃತ್ತದ ಮೂಲಕ, ಬೋಗಾದಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ವಿಎಂಡಿ ಜಂಕ್ಷನ್ ಬಳಿ ಬಲತಿರುವ ಪಡೆದು ಮುಂದೆ ನಿಗಧಿಪಡಿಸಿರುವ ಮಾರ್ಗಗಳ ಮೂಲಕ ಸಾಗಬಹುದಾಗಿದೆ ಎಂದು ನಗರದ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Gruha Lakshmi scheme: ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಿದ್ಧವಾಯ್ತು ಬೃಹತ್ ವೇದಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.