ಮೈಸೂರು: ಇಲ್ಲೊಬ್ಬರು 98 ವರ್ಷ ವೃದ್ಧ ವ್ಯಕ್ತಿ ಕೊರೊನಾ ರೋಗ ಗೆದ್ದು ಬಂದಿದ್ದು ನಗರ ಪಾಲಿಕೆ ಸದಸ್ಯೆ ಹಾಗೂ ಕುಟುಂಬಸ್ಥರು ಹೂಮಳೆಗೈದು ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡರು.
ನಗರದ ವಿದ್ಯಾರಣ್ಯಪುರಂ ನಿವಾಸಿ ಸೂರ್ಯನಾರಾಯಣ್ (98) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆಂಬ್ಯುಲೆನ್ಸ್ ಮೂಲಕ ಮನೆಗೆ ಆಗಮಿಸಿದಾಗ ಪುಷ್ಪಾರ್ಚನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಕೊರೊನಾ ಬಂದವರನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಅವರನ್ನು ದೂರ ಮಾಡುವುದು ಬೇಡ ಎನ್ನುವ ಉದ್ದೇಶದಿಂದ ಈ ರೀತಿಯ ಸ್ವಾಗತ ಕೋರಿದ್ದೇವೆ ಎಂದರು.