ETV Bharat / state

ಸರ್ಕಾರ ಸುಭದ್ರವಾಗಿದೆ, ಯಾರು ಏನನ್ನೂ ಮಾಡಲು ಸಾಧ್ಯವಿಲ್ಲ: ಸಚಿವ ಕೆ ವೆಂಕಟೇಶ್ - ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆ

ರೇಷ್ಮೆ ಇಲಾಖೆ ಸಚಿವರಾದ ಬಳಿಕ ಮೊದಲ ಬಾರಿಗೆ ಸಚಿವ ಕೆ ವೆಂಕಟೇಶ್​ ಅವರು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿದರು.

Minister K Venkatesh
ಸಚಿವ ಕೆ ವೆಂಕಟೇಶ್
author img

By

Published : Jul 26, 2023, 6:23 PM IST

ಸರ್ಕಾರ ಸುಭದ್ರವಾಗಿದೆ, ಯಾರು ಏನನ್ನೂ ಮಾಡಲು ಸಾಧ್ಯವಿಲ್ಲ: ಸಚಿವ ಕೆ ವೆಂಕಟೇಶ್

ಮೈಸೂರು: ನಮ್ಮ ಸರ್ಕಾರವನ್ನು ನೋಡಿ ವಿರೋಧ ಪಕ್ಷದವರಿಗೆ ಹೊಟ್ಟೆ ಉರಿ. ಅದಕ್ಕಾಗಿ ಸಿಂಗಾಪುರ ಮತ್ತೊಂದು ಮಗದೊಂದು ಎಂದು ಏನೇನೋ ಮಾಡುತ್ತಿದ್ದಾರೆ. ಅದ್ಯಾವುದು ಇಲ್ಲಿ ನಡೆಯುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಯಾರು ಏನನ್ನು ಮಾಡಲು ಸಾಧ್ಯವಿಲ್ಲ, ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆಯ ಸಚಿವ ಕೆ ವೆಂಕಟೇಶ್​ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಂದು ಮನೆಯೆಂದರೆ, ನಾಲ್ಕು ಜನ ಇದ್ದರೆ ಅವರಲ್ಲೇ ಭಿನ್ನಾಭಿಪ್ರಾಯ ಇರುತ್ತದೆ. ಇನ್ನು ಸರ್ಕಾರ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೆ ಇರುತ್ತದೆ. ಎಲ್ಲವನ್ನೂ ಸರಿಮಾಡಿಕೊಂಡು ಹೋಗುತ್ತೇವೆ. ಒಂದಿಷ್ಟು ಶಾಸಕರು ಪತ್ರ ಬರೆದಿರುವುದು ನಿಜ. ಅಂದ ಮಾತ್ರಕ್ಕೆ ಏನೋ ಆಗಿದೆ ಎಂದು ಅಂದುಕೊಳ್ಳಬೇಕಿಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದರು.

ತನ್ವೀರ್ ಪತ್ರ- ಪರಿಶೀಲನೆ ಮಾಡಿದರೆ ತಪ್ಪೇನು?: ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಬರೆದ ಪತ್ರದ ಬಗ್ಗೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮರುಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ‌. ತನ್ವೀರ್ ಸೇಠ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಚಿವರಿದ್ದಾರೆ. ಗಲಭೆಯಲ್ಲಿ ನಿಜವಾಗಿಯೂ ಇವರು ಭಾಗಿಯಾಗಿದ್ದಾರಾ ಅಥವಾ ಆರೋಪ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಲ್ಲವೇ ಎಂದು ತನ್ವೀರ್ ಪತ್ರ ಬರೆದ ಬಗ್ಗೆ ಸಚಿವ ವೆಂಕಟೇಶ್ ಸಮರ್ಥನೆ ಮಾಡಿಕೊಂಡರು.

ಸಚಿವರಾದ ಬಳಿಕ ಸಿಲ್ಕ್ ಫ್ಯಾಕ್ಟರಿಗೆ ಮೊದಲ ಭೇಟಿ: ರೇಷ್ಮೆ ಇಲಾಖೆ ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿನ ಸಿಲ್ಕ್ ಕಾರ್ಖಾನೆಗೆ ಸಚಿವರು ಭೇಟಿ ನೀಡಿ, ರೇಷ್ಮೆ ಸೀರೆ ತಯಾರಿಕಾ ಘಟಕವನ್ನು ವೀಕ್ಷಣೆ ಮಾಡಿದರು. ಒಂದು ರೇಷ್ಮೆ ಸೀರೆಗೆ 30 ರಿಂದ 40 ಸಾವಿರ ಇರಬೇಕು ಎಂದು ಕೇಳಿದ್ದೆ. ಇಂತಹ ರೇಷ್ಮೆ ಸೀರೆಯನ್ನು ಕಡಿಮೆ ದರದಲ್ಲಿ ಕೊಡಬಹುದಾ ಎಂಬ ಬಗ್ಗೆ ಅಧಿಕಾರಿಗಳಿಂದ ತಿಳಿದು, ನಂತರ ಈ ಬಗ್ಗೆ ಚರ್ಚಿಸಿ‌, ಮುಂದಿನ ದಿನಗಳಲ್ಲಿ ಬಡವರಿಗೂ ಸಹ ರೇಷ್ಮೆ ಸೀರೆಯನ್ನು ಕಡಿಮೆ ದರಕ್ಕೆ ಕೊಡುವ ಬಗ್ಗೆ ತಿಳಿಸುತ್ತೇನೆ ಎಂದ ಸಚಿವರು, ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ಇದೆ ಎಂದು ತಿಳಿಸಿದರು.

ಪಿರಿಯಾಪಟ್ಟಣ ಭಾಗದಲ್ಲಿ ತಂಬಾಕು ಬೆಳೆಗೆ ಪರ್ಯಾಯವಾಗಿ ರೇಷ್ಮೆ ಬೆಳೆ ಬೆಳೆಯಲು ಚಿಂತನೆ ನಡೆಸಲಾಗುತ್ತಿದೆ. ರಾಮನಗರ, ಚಾಮರಾಜನಗರ ಭಾಗದಲ್ಲಿ ಇರುವ ರೇಷ್ಮೆ ಖರೀದಿ ಕೇಂದ್ರದಂತೆ ಮೈಸೂರಿನಲ್ಲಿಯೂ ಒಂದು ರೇಷ್ಮೆ ಖರೀದಿ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಹೇಳಿಕೆ ನೀಡಿದರು. ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಮಧು ಬಂಗಾರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.