ಮೈಸೂರು: ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿದ್ದ ಫ್ರೀ ಕಾಶ್ಮೀರಿ ಫಲಕ ಈಗ ವಿವಾದಕ್ಕೆ ಕಾರಣವಾಗಿದೆ.
ನಿನ್ನೆ ನಡೆದ ಮೈಸೂರು ವಿವಿ ಕ್ಯಾಂಪಸ್ನ ಕ್ಲಾಕ್ ಟವರ್ನಿಂದ ಕುವೆಂಪು ಪ್ರತಿಮೆ ವರೆಗೆ ಮೈಸೂರು ವಿವಿಯ ಸಂಶೋಧನಾ ಸಂಘ, ದಲಿತರ ವಿದ್ಯಾರ್ಥಿ ಒಕ್ಕೂಟ, ಸ್ಟೂಡೆಂಟ್ ಆಫ್ ಇಂಡಿಯಾ ಹಾಗೂ ಬಹುಜನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ನಡೆಸಿದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಒಬ್ಬರು ಫ್ರೀ ಕಾಶ್ಮೀರಿ ಎಂಬ ನಾಮಫಲಕ ಹಿಡಿದುಕೊಂಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಡಿಸಿಪಿ ಮುತ್ತುರಾಜ್ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ನಿನ್ನೆ ನಡೆದ ಪ್ರತಿಭಟನೆಯ ವಿಡಿಯೋ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಹೇಳಿದರು.