ETV Bharat / state

ಮೂಡ ಸೈಟ್ ಕೊಡಿಸುವುದಾಗಿ ವಂಚನೆ : ರೆಸ್ಟೋರೆಂಟ್ ಮಾಲೀಕನ ಬಂಧನ

author img

By

Published : Dec 31, 2020, 6:25 PM IST

ಮೂಡ ಸೈಟ್​ ಕೊಡಿಸುವುದಾಗಿ ಐಟಿ, ಬಿಟಿ ಉದ್ಯೋಗಿಗಳಿಂದ ಹಣ ಪಡೆದು ವಂಚಿಸಿದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

Fraud by a restaurant owner in the name of MUDA Site
ಮೂಡ ಸೈಟ್ ಕೊಡಿಸುವುದಾಗಿ ವಂಚನೆ

ಮೈಸೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡ)ದ ನಕಲಿ ಕಲರ್​ ಲೆಟರ್ ಹೆಡ್ ಬಳಸಿ, ಕಡಿಮೆ ದರದಲ್ಲಿ ಸೈಟ್ ಕೊಡಿಸುತ್ತೇನೆಂದು ರೆಸ್ಟೋರೆಂಟ್ ಮಾಲೀಕನೊಬ್ಬ ಎರಡು ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ 25 ದಿನಗಳ ಹಿಂದೆ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮೂಡ ಅಧ್ಯಕ್ಷ ರಾಜೀವ್ ಅವರನ್ನು ಭೇಟಿ ಮಾಡಿ, ನಮಗೆ ಸೈಟ್ ಕೊಡಿಸುತ್ತೇನೆಂದು ಮೂಡ ಲೆಟರ್ ಹೆಡ್​ ತೋರಿಸಿ ಹಣ ಪಡೆದು ರಶೀದಿ ನೀಡಿರುವ ವ್ಯಕ್ತಿ ಸೈಟ್ ನೀಡುತ್ತಿಲ್ಲ ಎಂದು ದೂರು ನೀಡಿದ್ದರು. ಈ ಕುರಿತು ಮೂಡ ಅಧ್ಯಕ್ಷರು ಮಾಹಿತಿ ಕಲೆ ಹಾಕಿದಾಗ, ಸರಸ್ವತಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಸ್ಮಯ ರೆಸ್ಟೋರೆಂಟ್ ನಡೆಸುತ್ತಿರುವ ಸಾಗರ್ ದೇಶಪಾಂಡೆ ಎಂಬಾತ ನಕಲಿ ಕಲರ್ ಲೆಟರ್ ಹೆಡ್ ಬಳಸಿ ಸೈಟ್ ಕೊಡಿಸುವುದಾಗಿ 2 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ.

ಮೂಡ ಅಧ್ಯಕ್ಷ ರಾಜೀವ್

ಓದಿ : ಕೊಲೆಯಲ್ಲಿ ಅಂತ್ಯವಾದ ಗ್ರಾ.ಪಂ ಚುನಾವಣಾ ವಿಜಯೋತ್ಸವ

ಈ ಬಗ್ಗೆ ಸರಸ್ವತಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕ ಆರೋಪಿಯನ್ನು ಶಿರಡಿಯಲ್ಲಿ ವಶಕ್ಕೆ ಪಡೆದಿರುವ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಚಾರಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮೂಡ ಅಧ್ಯಕ್ಷರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.