ETV Bharat / state

ವೈದ್ಯರ ಮನೆಯಲ್ಲಿ ದರೋಡೆ: ನಾಲ್ವರು ಆರೋಪಿಗಳ ಬಂಧನ - ಮೈಸೂರು ಕ್ರೈಂ ನ್ಯೂಸ್​

ಮಾರ್ಚ್ 17ರ ರಾತ್ರಿ 8ರ ಸಮಯದಲ್ಲಿ ಸರಸ್ವತಿಪುರಂನ ಮನೆಯೊಂದರ ಬಾಗಿಲು ಬೆಲ್ ಮಾಡಿ, ಬಾಗಿಲು ತೆಗೆದ ಕೂಡಲೇ ಐವರು ಒಳನುಗ್ಗಿ ಕಳ್ಳತನ ಮಾಡಿದ್ದರು.

Four arrest
Four arrest
author img

By

Published : Mar 24, 2021, 3:20 AM IST

ಮೈಸೂರು: ವೈದ್ಯರ ಮನೆಯಲ್ಲಿ ದರೋಡೆ ಮಾಡಿದ್ದ ನಾಲ್ವರನ್ನು ಬಂಧಿಸಿ, ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಸರಸ್ವತಿಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ನವೀನ್ ಕುಮಾರ್(25), ವರುಣಾ ಹೋಬಳಿಯ ಮೆಲ್ಲಹಳ್ಳಿ ಗ್ರಾಮದ ಜೆ‌.ರವಿ(30), ಎಚ್ ಡಿ ಕೋಟೆ ತಾಲೂಕಿನ ಹಂಪಾಪುರ ಗ್ರಾಮದ ಸತೀಶ್(33), ಕೆಜಿ ಕೊಪ್ಪಲಿನ ಅವಿನಾಶ್(25) ಬಂಧಿತ ದರೋಡೆಕೋರರು‌. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ 9,86,200 ರೂ.ನಗದು, 2.44 ಲಕ್ಷ ರೂ. ಮೌಲ್ಯದ 42 ಗ್ರಾಂ ಚಿನ್ನಾಭರಣ, 1.145 ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ವೋಕ್ಸ್ ವೇಗನ್ ಪೋಲೋ ಕಾರು,ಒಂದು ಮೊಬೈಲ್ ಫೋನ್ ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎರಡನೇ ಸಲ ಕೋವಿಡ್ ಸೋಂಕಿಗೊಳಗಾದ ಸಚಿವ ಧನಂಜಯ್​ ಮುಂಡೆ!

ಮಾರ್ಚ್ 17ರ ರಾತ್ರಿ 8ರ ಸಮಯದಲ್ಲಿ ಸರಸ್ವತಿಪುರಂನ ಮನೆಯೊಂದರ ಬಾಗಿಲು ಬೆಲ್ ಮಾಡಿ, ಬಾಗಿಲು ತೆಗೆದ ಕೂಡಲೇ ಐವರು ಒಳನುಗ್ಗಿದ್ದಾರೆ. ನಂತರ ಚಾಕು,ಸುತ್ತಿಗೆ ಡ್ರೈವರ್, ತೋರಿಸಿ ಬೆದರಿಕೆ ಹಾಕಿ ಮನೆಯಲ್ಲಿದ್ದ ಅಜ್ಜಿ-ತಾತ ಇಬ್ಬರು ಯುವಕರ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ಪ್ಲಾಸ್ಟರ್ ಹಾಕಿ, 10 ಲಕ್ಷ ರೂ. ನಗದು,140 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿಯ ಆಭರಣ ದೋಚಿಕೊಂಡು ಹೋಗಿದ್ದರು. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು‌‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.