ಮೈಸೂರು: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನಗರದ ಅಗ್ರಹಾರದಲ್ಲಿರುವ ಟಾಂಗಾ ಗಾಡಿ ನಿಲ್ದಾಣದಲ್ಲಿ ಕುದುರೆಗಳಿಗೆ ಮೇವು ವಿತರಿಸಿದರು.
ಮೈಸೂರು ಟಾಂಗಾಗಳ ನಗರಿಯಂದೇ ಪ್ರಸಿದ್ಧಿ ಪಡೆದಿದ್ದು, ಟಾಂಗಾ ನಂಬಿ ಬದುಕುವ ಜನರು ಸಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಮಾಜಿ ಶಾಸಕ ಸೋಮಶೇಖರ್, ಟಾಂಗಾ ಗಾಡಿ ನಿಲ್ದಾಣಕ್ಕೆ ಬಂದು ಕುದುರೆಗಳಿಗೆ ಮೇವು ಹಾಗೂ ಅವುಗಳನ್ನು ನೋಡಿಕೊಳ್ಳುವ ಟಾಂಗಾವಾಲಗಳಿಗೆ ದಿನಸಿ ಕಿಟ್ ವಿತರಿಸಿದರು.