ETV Bharat / state

ಬಡವ, ದುರ್ಬಲ ವರ್ಗದವರಿಗೆ ಹಲವು ಯೋಜನೆಗಳನ್ನು ಮೋದಿ ಕೊಟ್ಟಿದ್ದಾರೆ: ಬಿಎಸ್​ವೈ - Modi Yug Utsav program in Mysore

ಪ್ರಧಾನಿ ಮೋದಿ ಏಳು ವರ್ಷಗಳಲ್ಲಿ ವಿಶ್ವದಲ್ಲಿಯೇ ದೇಶವನ್ನು ಮುಂಚೂಣಿಗೆ ಬರುವಂತೆ ಮಾಡಿದ್ದಾರೆ. ದೇಶ ರಕ್ಷಣೆ ಕುರಿತು ಬದ್ಧತೆ ಪ್ರದರ್ಶಿಸಿದ್ದಾರೆ. ಬಡವರ ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಹಲವು ಉತ್ತಮ ಯೋಜನೆಗಳನ್ನು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Modi Yug Utsav program in Mysore
ಬಿ.ಎಸ್.ಯಡಿಯೂರಪ್ಪ
author img

By

Published : Sep 17, 2021, 6:28 PM IST

Updated : Sep 17, 2021, 10:32 PM IST

ಮೈಸೂರು: ಬಡವರ ಹಾಗೂ ದುರ್ಬಲ ವರ್ಗದವರಿಗೆ ಪ್ರಧಾನಿ ಮೋದಿ ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶಾಸಕ ರಾಮದಾಸ್ ಅವರ ಕಚೇರಿ ಸಮೀಪ‌ ಏರ್ಪಡಿಸಿದ್ದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್​ವೈ, ಹೆಣ್ಣುಮಕ್ಕಳು ಬೆಳೆಯಬೇಕು, ಸ್ವತಂತ್ರವಾಗಿ ನಿಲ್ಲಬೇಕು ಎಂಬ ಆಲೋಚನೆಗಳು ಮೋದಿ ಅವರಿಗಿದೆ. ಅವರು ದೇಶ ಕಂಡ ಅಪ್ರತಿಮ ನಾಯಕ ಎಂದು ಗುಣಗಾನ ಮಾಡಿದರು.

ಮೋದಿ ಯುಗ್ ಉತ್ಸವ್ ಕಾರ್ಯಕ್ರಮ

ಏಳು ವರ್ಷಗಳಲ್ಲಿ ವಿಶ್ವದಲ್ಲಿಯೇ ದೇಶವನ್ನು ಮುಂಚೂಣಿಗೆ ಬರುವಂತೆ ಮಾಡಿದ್ದಾರೆ. ಅಲ್ಲದೆ ದೇಶ ರಕ್ಷಣೆ ಕುರಿತು ಬದ್ಧತೆ ಪ್ರದರ್ಶನ ಮಾಡಿದ್ದಾರೆ. ಬಡವರ ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಹಲವು ಉತ್ತಮ ಯೋಜನೆಗಳನ್ನು ಮಾಡಿದ್ದಾರೆ. ಕೋವಿಡ್ ನಡುವೆಯೂ ಅಭಿವೃದ್ಧಿ, ಆರೋಗ್ಯ, ಮೂಲ ಸೌಕರ್ಯಕ್ಕಾಗಿ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಧಾನಿ ಮೋದಿ ಅಭಿವೃದ್ಧಿಯ ನಾಯಕ, ಅವರ ಕೆಲಸಗಳು ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹತ್ತಾರು ವರ್ಷ ಅವರು ಇರಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಿದರು.

ಇದನ್ನೂ ಓದಿ: ಚಿಗರಿ ಮಾರ್ಗದಲ್ಲಿ ಎಗರಿ ಎಗರಿ ಓಡಿದ ಚಿಗರಿ: ವಿಡಿಯೋ ನೋಡಿ

Last Updated : Sep 17, 2021, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.