ETV Bharat / state

'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್​ಡಿಕೆ ಹೀಗೆ ಹೇಳಿದ್ಯಾಕೆ? - Former CM Kumaraswamy Press meet in mysore

ನನಗೆ ಬಿಜೆಪಿ ಜೊತೆ ಸಂಬಂಧ ಇದ್ದಿದ್ದರೆ ನಾನೇ ಸಿಎಂ ಆಗಿ ಮುಂದುವರೆಯುತ್ತಿದ್ದೆ. ಕಾಂಗ್ರೆಸ್​​​ನವರ ಸಹವಾಸ ಮಾಡಿ 12 ವರ್ಷಗಳ ಕಾಲ ಇದ್ದ ಗುಡ್ ವಿಲ್ ಅನ್ನು ಕಳೆದುಕೊಂಡೆ. ನಾನು ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Dec 5, 2020, 3:48 PM IST

ಮೈಸೂರು: ನಾನು ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ. ಕಾಂಗ್ರೆಸ್ ನವರು ನನ್ನನು ಆಡಳಿತ ನಡೆಸಲು ಬಿಡಲಿಲ್ಲ. ಸಿಎಂ ಆಗಿ ಇರಲು ಸಿದ್ದರಾಮಯ್ಯ ಗುಂಪು ಬಿಡಲಿಲ್ಲ. ಆದರೆ, ಈ ರೀತಿ ಬಿಜೆಪಿಯವರು ದ್ರೋಹ ಮಾಡಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತಿದ್ದು, ಬಿಜೆಪಿ ಓಟ ತಡೆಯಲು ಇದಕ್ಕೆ ಸಾಧ್ಯವಾಗಿಲ್ಲ. ಅದನ್ನು ತಡೆಯಲು ಇತರ ಎಲ್ಲ ಸಿಎಂಗಳು ಸೇರಿ‌ ಪುನಃ ತೃತೀಯ ರಂಗದ ರಚನೆ ಬಗ್ಗೆ ಮಾತುಕತೆ ನಡೆಸುತ್ತೇವೆ. ನನಗೆ ಬಿಜೆಪಿ ಜೊತೆ ಸಂಬಂಧ ಇದ್ದಿದ್ದರೆ ನಾನೇ ಸಿಎಂ ಆಗಿ ಮುಂದುವರೆಯುತ್ತಿದ್ದೆ. ಕಾಂಗ್ರೆಸ್​​​​​ನವರ ಸಹವಾಸ ಮಾಡಿ 12 ವರ್ಷಗಳ ಕಾಲ ಇದ್ದ ಗುಡ್ ವಿಲ್ ಅನ್ನು ಕಳೆದುಕೊಂಡೆ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್​ನವರು ಸಹಿಸಲಿಲ್ಲ, ಅಪಪ್ರಚಾರ ನಡೆಸಿದ್ದರು. ಸಿದ್ದರಾಮಯ್ಯ ಕದ್ದುಮುಚ್ಚಿ ಯಾರನ್ನೆಲ್ಲ ಭೇಟಿ ಮಾಡಿದ್ದರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.