ಮೈಸೂರು : ಇಂದು ಜನರೇ ಮೊಬೈಲ್ ಹಿಡಿದುಕೊಂಡು ಪತ್ರಕರ್ತರಾಗುತ್ತಿದ್ದಾರೆ. ಯಾರಿಗಾದರೂ ಬೈದು ಮಾತನಾಡುವಾಗ ಅದನ್ನ ಎಡಿಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಯಾವುದೋ ಸಣ್ಣಪುಟ್ಟ ತಪ್ಪುಗಳಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಅದನ್ನು ಬಿಟ್ಟು ತಮಗೆ ಬೇಕಾದಷ್ಟನ್ನ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮನವಿ ಮಾಡಿದ್ದಾರೆ.
ಇಂದು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಿನ್ನೆ ವರುಣಾ ಕ್ಷೇತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆದಿದೆ ಎಂದು ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ, ಆ ವಿಡಿಯೋದಲ್ಲಿ ಪ್ರತಾಪ್ ಸಿಂಹಗೆ ತರಾಟೆ ಎಂದು ಹಾಕಲಾಗಿದೆ.
ಇದನ್ನೂ ಓದಿ: ಇಷ್ಟು ದಿನ ಹಿಂದಿ ಹೇರಿಕೆ ಅಂದರು, ಈಗ ಅಮೂಲ್ ಹೇರಿಕೆ ಎನ್ನುತ್ತಿದ್ದಾರೆ : ಪ್ರತಾಪಸಿಂಹ
ಸತ್ಯವನ್ನು ಮರೆ ಮಾಚುತ್ತಿರುವುದು ಸರಿಯಲ್ಲ: ಆದರೆ ತಮಗೆ ಬೇಕಾಗಿರುವುದನ್ನು ವಿಡಿಯೊ ಎಡಿಟ್ ಮಾಡಿ ಹಾಕಲಾಗುತ್ತಿದ್ದು, ಈ ರೀತಿ ಮಾಡುವುದು ಸರಿಯಲ್ಲ. ಇತ್ತೀಚೆಗೆ ಜನರೇ ಮೊಬೈಲ್ ಹಿಡಿದು ಪತ್ರಕರ್ತರಾಗುತ್ತಿದ್ದಾರೆ. ಆದರೆ, ಬೈದ ವಿಡಿಯೋವನ್ನು ಮಾತ್ರ ಹಾಕಿ, ಸತ್ಯ ಮರೆಮಾಚಿ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸುತ್ತಿದ್ದಾರೆ. ಇದು ಒಂದು ಒಳ್ಳೆಯ ಬೆಳವಣಿಗೆ. ಆದರೂ ಸತ್ಯವನ್ನು ಮರೆಮಾಚುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ ಹಾಕಿದ್ರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ: ಪ್ರತಾಪ್ ಸಿಂಹ
ಸಿದ್ಧರಾಮಯ್ಯ ಅವರಿಗೂ ಬಾದಾಮಿಗೂ ಏನು ಸಂಬಂಧ: ವರುಣಾಗೂ ಸೋಮಣ್ಣನಿಗೂ ಏನು ಸಂಬಂಧ ಎಂದು ಕೇಳುವ ಸಿದ್ದರಾಮಯ್ಯ, ತಮಗೂ ಬಾದಾಮಿಗೂ ಏನು ಸಂಬಂಧ, ಇಟಲಿಯ ಸೋನಿಯಾ ಗಾಂಧಿಗೂ ಬಳ್ಳಾರಿಗೂ ಏನು ಸಂಬಂಧ ಎಂದು ತಿಳಿಸಲಿ ಎಂದು ವ್ಯಂಗ್ಯವಾಡಿದರು.
ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಿ - ಸಂಸದ ಪ್ರತಾಪ್ ಸಿಂಹ: ಸಿದ್ದರಾಮಯ್ಯ ದೂರ ದೃಷ್ಟಿ ಇಲ್ಲದ ನಾಯಕ, ಕಾಂಗ್ರೆಸ್ 10 ಕೆಜಿ ಅಕ್ಕಿ ಸೇರಿದಂತೆ ಇತರ ಗ್ಯಾರಂಟಿಗಳನ್ನ ನೀಡುತ್ತಿದ್ದು, ಅವುಗಳನ್ನು ಅವರ ಮನೆಯಿಂದ ತಂದು ಕೊಡುತ್ತಾರಾ? ಎಂದು ಪ್ರಶ್ನೆ ಮಾಡಿದರು. ಸರ್ಕಾರದಿಂದ ಗ್ಯಾರಂಟಿ ಕೊಟ್ಟರೆ, ದೇಶಕ್ಕೆ ಶ್ರೀಲಂಕಾ, ಪಾಕಿಸ್ತಾನದ ಸ್ಥಿತಿ ಬರುತ್ತದೆ. ಪಾಕಿಸ್ತಾನದಲ್ಲಿ ಆಹಾರಕ್ಕೂ ಪರದಾಟ ಪಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಪ್ರಚಾರದ ಸಂದರ್ಭದಲ್ಲಿ ಏನೋ ಸಣ್ಣ ಪುಟ್ಟ ತಪ್ಪು ಮಾತನಾಡಿದ್ದರೆ, ಆ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಿ. ದೊಡ್ಡದನ್ನ ಮಾಡಬೇಡಿ ಎಂದು ಸಮ್ಮೇಳನದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಮನವಿ ಮಾಡಿದರು.
ಇದನ್ನೂ ಓದಿ : ಸೋಮಣ್ಣ ವರುಣಗೆ ಬಂದಿದ್ದು ಸಿದ್ದುಗೆ ಭಯ ಹುಟ್ಟಿಸಿದೆ: ಪ್ರತಾಪ್ ಸಿಂಹ