ಮೈಸೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಾವು ಸಂಗ್ರಹಿಸಿದ್ದ ದೇಣಿಗೆ ನೀಡಿದ್ದಾರೆ.
ಲಾಕ್ಡೌನ್ನಿಂದ ಮೃಗಾಲಯದ ಪ್ರಾಣಿಗಳು ಹಾಗೂ ನೌಕರರು ಸಂಕಷ್ಟಕ್ಕೆ ಸಿಲುಕಿದ್ದು, ಸಹಾಯಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಳೆದ ವಾರ 72 ಲಕ್ಷದ 16 ಸಾವಿರ, ಇಂದು ಮತ್ತೆ 45 ಲಕ್ಷ 30 ಸಾವಿರ ಹಣ ದೇಣಿಗೆಯನ್ನು ತಮ್ಮ ಯಶವಂತಪುರ ವಿಧಾನಸಭಾ ಕ್ಷೇತ್ರದ ದಾನಿಗಳಿಂದ ಸಂಗ್ರಹಿಸಿದ್ದರು. ಇಂದು ಆ ಹಣದ ಚೆಕ್ಅನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜೀತ್ ಕುಲಕರ್ಣಿಗೆ ಹಸ್ತಾಂತರಿಸಿದರು.
ಇನ್ನು ಆಹಾರ ಸಚಿವ ಗೋಪಾಲಯ್ಯ ಇಂದು ಮೃಗಾಲಯಕ್ಕೆ ಉಸ್ತುವಾರಿ ಸಚಿವರ ಜೊತೆ ಆಗಮಿಸಿ, ತಾವು ಸಂಗ್ರಹಿಸಿದ್ದ 8 ಲಕ್ಷ ಹಣ ಹಾಗೂ ಮೃಗಾಲಯದಲ್ಲಿ ಕೆಲಸ ಮಾಡುವ 300 ಸಿಬ್ಬಂದಿ ಗೆವೈಯಕ್ತಿಕವಾಗಿ ತಲಾ 25 ಕೆಜಿ ಅಕ್ಕಿ ನೀಡಿ ಮಾನವೀಯತೆ ಮೆರೆದಿದ್ದಾರೆ.