ಮೈಸೂರು: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಜುಬಿಲಂಟ್ ಕಾರ್ಖಾನೆ ಆಹಾರದ ಕಿಟ್ ನೀಡಿದೆ. ಈ ಕಿಟ್ಗಳು ಬಿಜೆಪಿ ನಗರ ಘಟಕದ ಅಧ್ಯಕ್ಷರ ಕಲ್ಯಾಣಮಂಟಪದಲ್ಲಿ ಪತ್ತೆಯಾಗಿದ್ದು, ಇದು ಚರ್ಚೆಗೆ ಗುರಿಯಾಗಿದೆ.
ಜುಬಿಲಂಟ್ ಕಾರ್ಖಾನೆಯಿಂದಾಗಿ ಕೊರೊನಾ ಹಾಟ್ಸ್ಪಾಟ್ ಆಗಿದ್ದ ನಂಜನಗೂಡು ತಾಲೂಕು, ಕೆಲವೇ ದಿನಗಳಲ್ಲಿ ರೆಡ್ಝೋನ್ ಆಗಿ ಹೊರಹೊಮ್ಮಿತ್ತು.
ಆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ 50,000 ಆಹಾರದ ಕಿಟ್ ನೀಡಬೇಕು ಎಂದು ಜುಬಿಲಂಟ್ ಕಾರ್ಖಾನೆ ಮತ್ತು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ನಡುವೆ ಒಪ್ಪಂದವಾಗಿತ್ತು.
ಒಪ್ಪಂದದ ಅನ್ವಯ ಜುಬಿಲಂಟ್ ಕಾರ್ಖಾನೆ ಆಹಾರ ಕಿಟ್ಗಳನ್ನು ನೀಡಿದ್ದು, ಈ ಆಹಾರ ಕಿಟ್ಗಳು ಇನ್ನೂ ಕೂಡಾ ಬಡ ಜನರಿಗೆ ತಲುಪಿಲ್ಲ. ಬದಲಾಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಅವರ ಕಲ್ಯಾಣಮಂಟಪದಲ್ಲಿ ಪತ್ತೆಯಾಗಿವೆ.
ಇದನ್ನು ರಹಸ್ಯವಾಗಿ ಮುಚ್ಚಿಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಆಹಾರ ಕಿಟ್ಗಳು ಬಡ ಜನರಿಗೆ ತಲುಪದೇ, ಕಲ್ಯಾಣ ಮಂಟಪದಲ್ಲಿ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.