ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಣ್ಣು-ತರಕಾರಿ, ಹೂ,ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಭರ್ಜರಿಯಾಗಿಯೇ ಪದಾರ್ಥಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ.
ಸಾಂಸ್ಕೃತಿಕ ನಗರಿಯಲ್ಲಿ ಗೌರಿ–ಗಣೇಶ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದ್ದು,ಹಬ್ಬದ ಮುನ್ನಾ ದಿನವೇ ಗಗನಕ್ಕೇರಿದ ಹೂವಿನ ಬೆಲೆ ಗಗನಕ್ಕೇರಿದ್ದು, ಬೆಲೆ ಏರಿಕೆಯ ನಡುವೆಯೂ ಗೌರಿ ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ.
ಪೂಜಾ ಸಾಮಗ್ರಿ, ಗಣೇಶ ಮೂರ್ತಿ ಖರೀದಿಸಲು ನಗರದ ದೇವರಾಜ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ. ವಸ್ತುಗಳ ಬೆಲೆ ಏರಿಕೆ ನಡುವೆಯೂ ವಹಿವಾಟು ಕುಂದಿಲ್ಲ. ರಸ್ತೆಗಳ ಬದಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಹೂವು, ಹಣ್ಣು, ಬಾಳೆಕಂದು, ತುಳಸಿ, ಮಾವಿನ ಸೊಪ್ಪು, ಮೊರ ಮಾರಾಟ ಬಲು ಜೋರಾಗಿದೆ.
ಗಗನಕ್ಕೇರಿದ ಹೂವಿನ ಬೆಲೆ
ಕನಕಾಂಬರ- 2000 ರೂ.
ಮಲ್ಲಿಗೆ - 1000 ರೂ.
ಕಾಕಡ- 800 ರೂ.
ಸೇವಂತಿಗೆ 200 ರೂ.
ಚೆಂಡು ಹೂ 30 ರೂ.
ಹಣ್ಣುಗಳ ಬೆಲೆ(ಕೆಜಿಗೆ)
ಸೀಬೆಕಾಯಿ- 160 ರೂ. ಕೆಜಿಗೆ
ಮರದ ಸೇಬು -120
ಅನಾನಸ್ -40
ಬಾಳೆ ಹಣ್ಣು -120
ಕಲ್ಲಂಗಡಿ- 30
ಪರಂಗಿ -40
ಕಮರಾಕ್ಷಿ (ಸ್ಟಾರ್ ಪ್ರೂಟ್) - 30 ಒಂದು ಹಣ್ಣಿಗೆ
ಸೇಬು -140
ಮೊಸಂಬಿ -100
ದ್ರಾಕ್ಷಿ -120
ದಾಳಿಂಬೆ -140
ಕಿತ್ತಳೆ -120 ರೂ.
ಗೌರಿ- ಗಣೇಶ ಹಬ್ಬದ ಕಿಟ್‌ವೊಂದರ ಬೆಲೆ 1500 ರೂ.