ಮೈಸೂರು: ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿದೆ. ಈ ಘಟನೆ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯಕ್ಕೆ ಸೇರಿದ ತಾರಕ ಗ್ರಾಮದ ಜಮೀನೊಂದರಲ್ಲಿ ಸುಮಾರು 12-13 ವರ್ಷದ ಹೆಣ್ಣು ಹುಲಿ ಕಳೇಬರ ಸಿಕ್ಕಿದೆ. ಕಾಡುಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವಿಗೀಡಾಗಿರುವುದು ತಿಳಿದುಬಂದಿದೆ.
ಸಾವನ್ನಪಿರುವ ಹೆಣ್ಣು ಹುಲಿಗೆ ಮೂರು ಮರಿಗಳಿದ್ದು, ಅವುಗಳ ರಕ್ಷಣೆ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆ ಹುಡುಕಾಟದಲ್ಲಿ ತೊಡಗಿದೆ. ಈಗಾಗಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಹುಲಿ ಸತ್ತ ಪ್ರದೇಶದ ಸುತ್ತಲೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಮೈತ್ರಿ ಬಾಗ್ ಮೃಗಾಲಯದಲ್ಲಿ 2 ತಿಂಗಳ ಬಿಳಿ ಹುಲಿ 'ಸಿಂಗಮ್' ಸಂಭ್ರಮ- ವಿಡಿಯೋ
ಪಶುವೈದ್ಯರಾದ ರಮೇಶ್ ಮತ್ತು ಪ್ರಸನ್ನರವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ವ್ಯಾಪ್ತಿಯಲ್ಲಿ ಹುಲಿಯ ಕಳೇಬರದ ಅಂತ್ಯಕ್ರಿಯೆ ನಡೆಸಲಾಯಿತು.