ETV Bharat / state

ಮಗು ಕೊಟ್ಟು ಮದುವೆಯಾಗದ ಯುವಕ... ನೊಂದ ಅಪ್ರಾಪ್ತೆಯ ತಂದೆ ಆತ್ಮಹತ್ಯೆ! - father suicide

ಹದ್ದು ಮೀರಿದ ಮಗಳ ಕೆಸಲದಿಂದ ಮನನೊಂದ ತಂದೆಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಂಜು
author img

By

Published : Jun 17, 2019, 12:56 PM IST

ಮೈಸೂರು: ಅಪ್ರಾಪ್ತ ಮಗಳ ಯಡವಟ್ಟಿನಿಂದ ಮನನೊಂದ ತಂದೆಯೊಬ್ಬ ಜಮೀನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಘಟನೆ ವಿವರ:

ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ರಜೆ ಸಿಕ್ಕಾಗೆಲ್ಲಾ ತನ್ನ ಅಜ್ಜಿಯ ಮನೆಗೆ ತೆರಳುತ್ತಿದ್ದಳಂತೆ. ಆ ಸಂದರ್ಭದಲ್ಲಿ ಗ್ರಾಮದ ಮಂಜು ಎಂಬ ಯುವಕನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಪರಿಣಾಮ ಆಕೆ ಆತನಿಂದ ಒಂದು ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾಳೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ತಂದೆ, ತನ್ನ ಮಗಳನ್ನು ಮದುವೆಯಾಗುವಂತೆ ಯುವಕನಲ್ಲಿ ಮನವಿ ಮಾಡಿದ್ದರಂತೆ. ಆದರೆ ಈ ಮನವಿ ತಿರಸ್ಕರಿಸಿದ ಯುವಕನ‌ ವರ್ತನೆಯಿಂದ ಬೇಸತ್ತು​ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಮೃತ ವ್ಯಕ್ತಿಯ ಹೆಂಡತಿ ಯುವಕನ ವಿರುದ್ಧ ಹುಲ್ಲಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Intro:ಮೈಸೂರು: ಅಪ್ರಾಪ್ತ ಮಗಳ ಎಡವಟ್ಟಿನಿಂದ ಮಾನಕ್ಕಂಜಿ ತಂದೆ ಜಮೀನಲ್ಲೇ ಬಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.Body:
ಘಟನೆ ವಿವರ: ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ರಜೆ ಸಿಕ್ಕ ಸಂದರ್ಭದಲ್ಲಿ ತನ್ನ ಅಜ್ಜಿನ ಮನೆ ನಂಜನಗೂಡು ತಾಲ್ಲೂಕಿನ ಹುರಿಹುಂಡಿ ಗ್ರಾಮಕ್ಕೆ ತೆರಳುತ್ತಿದ್ದಳು.
ಆ ಸಂದರ್ಭದಲ್ಲಿ ಗ್ರಾಮದ ಮಂಜು ಎಂಬ ಯುವಕ ಪರಿಚಯವಾಗಿ ಆಕೆ ಆತನಿಂದ ಗರ್ಭಿಣಿಯಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ನ ನೀಡಿದ್ದಾಳೆ.
ಈ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ತಂದೆ ಮಹೇಶ್ ಕುಮಾರ್ ಯುವಕನನ್ನು ಮದುವೆಯಾಗುವಂತೆ ಮನವಿ ಮಾಡಿದ್ದು ಈ ಮನವಿ ತಿರಸ್ಕರಿಸಿದ ಯುವಕನ‌ ವರ್ತನೆಯಿಂದ ಬೇಸತ್ತ ತಂದೆ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಮೃತ ವ್ಯಕ್ತಿಯ ಹೆಂಡತಿ ಯುವಕನ ವಿರುದ್ಧ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.