ಮೈಸೂರು: ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ಜಾರಿಗೊಳಿಸದಂತೆ ಮತ್ತು ಸಂವಿಧಾನ ಉಳಿಸುವಂತೆ ಒತ್ತಾಯಿಸಿ ಹಿರಿಯ ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಸಂವಿಧಾನ ರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
ಭಾರತ ಬಹುಮುಖಿ ನೆಲೆಯ ರಾಷ್ಟ್ರ, ಹಿಂದೂಗಳಂತೆ ಮುಸ್ಲಿಂಮರು, ಕ್ರಿಶ್ಚಿಯನ್, ಬೌದ್ಧರು, ಸಿಖ್ರು ಹೀಗೆ ವಿಭಿನ್ನ ಧಾರ್ಮಿಕ ನಂಬಿಕೆಯ ಜನ ನೆಮ್ಮದಿಯಿಂದ ಬದುಕುತ್ತಿರುವ ರಾಷ್ಟ್ರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ನೆಮ್ಮದಿ ಕದಡುತ್ತಿವೆ. ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮದ ಹೆಸರಿನಲ್ಲಿ ಜನರನ್ನು ಒಡೆದಾಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಸಿಎಎ ಮತ್ತು ಇದರ ಮರಿಗಳಾದ ಎನ್ಆರ್ಸಿ ಹಾಗೂ ಎನ್ಪಿಆರ್ಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅನೇಕ ಹಿಂಸಾತ್ಮಕ ಮಾರ್ಗಗಳನ್ನು ಬಳಸುತ್ತಿದೆ. ದೆಹಲಿಯಲ್ಲಿ ನಡೆದ ಹಿಂಸಾಚಾರ ಮತ್ತು ಅದಕ್ಕೆ ಬಲಿಯಾದ 50ಕ್ಕೂ ನಾಗರಿಕರ ಜೀವಗಳು ಕೇಂದ್ರ ಸರ್ಕಾರದ ಹಿಟ್ಲರ್ ಕೃತ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.