ಮೈಸೂರು : ಅವೈಜ್ಞಾನಿಕವಾಗಿ ಭತ್ತ ಖರೀದಿ ಹಿನ್ನೆಲೆ ಕೃಷಿ ಸಚಿವ ಬಿ ಸಿ ಪಾಟೀಲ್‌ಗೆ ಮುತ್ತಿಗೆ ಹಾಕಿದ ರೈತರು ತರಾಟೆಗೆ ತೆಗೆದುಕೊಂಡ ಘಟನೆ
ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದಿದೆ.
ಕೃಷಿ ಅಧಿಕಾರಿಗಳ ಸಭೆ ನಡೆಸಿ ಹೊರ ಬಂದ ವೇಳೆ ಕೃಷಿ ಸಚಿವ ಬಿ ಸಿ ಪಾಟೀಲರಿಗೆ ರೈತರು ಮುತ್ತಿಗೆ ಹಾಕಿದ್ದಾರೆ. ‘ನೀವೇನ್ ಆಕಾಶದಿಂದ ಉದುರಿದ್ದೀರಾ.. ನಿಮ್ಗೆ ನಾಚಿಕೆ ಆಗ್ಬೇಕು. ಕೇವಲ ಹಸಿರು ಟವೆಲ್ ಹಾಕಿಕೊಂಡು ಭಾಷಣ ಮಾಡಿದ್ರೆ ಸಾಲದು’ ಎಂದು ಕಿಡಿಕಾರಿದರು.
ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂದೆ ರೈತರ ಹೋರಾಟ 57ನೇ ದಿನಕ್ಕೆ ಕಾಲಿಟ್ಟಿದೆ. ನಿಮ್ಮ ಮಿನಿಸ್ಟರ್‌ಗೆ ಬಂದು ಮಾತನಾಡುವ ಯೋಗ್ಯತೆ ಇಲ್ಲ ಎಂದು ಬಿ ಸಿಪಾಟೀಲ್‌ಗೆ ರೈತರು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡರು.
ಇದನ್ನೂ ಓದಿ: ಮೈಸೂರು: ನುಗು ಹಿನ್ನೀರಿನಲ್ಲಿ ಮೀನಿನ ಬಲೆಗೆ ಸಿಲುಕಿದ ಕಾಡಾನೆ - ವಿಡಿಯೋ