ETV Bharat / state

ಕೃಷಿ ಕ್ಷೇತ್ರಕ್ಕೆ ಕೊರೊನಾ ವರದಾನ.. ರೈತರ ಆತ್ಮಹತ್ಯೆ ಪ್ರಮಾಣ ಗಣನೀಯ ಇಳಿಕೆ

author img

By

Published : May 21, 2021, 8:43 PM IST

ಕೊರೊನಾ ಹಾಗೂ ಲಾಕ್​ಡೌನ್​ ಸಮಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ..

ರೈತರ ಆತ್ಮಹತ್ಯೆ ಪ್ರಮಾಣ ಗಣನೀಯ ಇಳಿಕೆ
ರೈತರ ಆತ್ಮಹತ್ಯೆ ಪ್ರಮಾಣ ಗಣನೀಯ ಇಳಿಕೆ

ಮೈಸೂರು : ಕೊರೊನಾದಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂದು ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ಡಾ.ಎಂ‌.ಮಹಾಂತೇಶಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ನಿಖರ ಕಾರಣಗಳಿಲ್ಲದಿದ್ದರೂ ಕೊರೊನಾ ಸಮಯದಲ್ಲಿ ಆತ್ಮಹತ್ಯೆ ಪ್ರಕರಣಗಳಂತೂ ಕಡಿಮೆಯಾಗಿವೆ ಎಂದಿದ್ದಾರೆ. 2017, 2018,2019ರ ಸಾಲಿನಲ್ಲಿ ಪ್ರತಿ ವರ್ಷ ರೈತರ ಆತ್ಮಹತ್ಯೆ ಪ್ರಕರಣಗಳು 100ಕ್ಕೂ ಹೆಚ್ಚಿರುತ್ತಿದ್ದವು. ಆದರೆ, ಕಳೆದ ವರ್ಷ ಆರಂಭಗೊಂಡು ಈವರೆಗೆ ರೈತರ ಆತ್ಮಹತ್ಯೆ ಪ್ರಕರಣ ಶೇ.70ರಷ್ಟು ಕಡಿಮೆಯಾಗಿವೆ ಎಂದಿದ್ದಾರೆ.

ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ಡಾ.ಎಂ‌.ಮಹಾಂತೇಶಪ್ಪ

ಅಲ್ಲದೆ ದೂರದ ನಗರದಿಂದ ಬಂದವರು ಹಾಗೂ ರೈತರು ಜಮೀನುಗಳಿಗೆ ತೆರಳಿ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ತೊಡಗಿಸಿಕೊಂಡಿದ್ದಾರೆ. ಈ ಬೆಳವಣಿಗೆ ಆಶಾದಾಯಕವಾಗಿದ್ದು, ಉತ್ಪಾದನೆ ಹೆಚ್ಚಾಗಲಿದೆ ಎಂದರು.

ಅಲ್ಲದೆ ಜಿಲ್ಲೆಗೆ 165 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, ಈವರೆಗೆ 161 ಮೀ.ಮೀ ಮಳೆಯಾಗಿದೆ. ಶೇ.2ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. 3,95,774 ಹೆಕ್ಟೇರ್ ಪ್ರದೇಶದಲ್ಲಿ 86,723 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ತೊಂದರೆ ಇಲ್ಲ, ಜಿಲ್ಲೆಯಲ್ಲಿ 1,200 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದೆ. ಪಿಎಂ ಕಿಸಾನ್ ಯೋಜನೆಯಿಂದ 2,27,417 ರೈತರಿಗೆ 45.48 ಕೋಟಿ ರೂ.ಹಣ ಬಂದಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.