ETV Bharat / state

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ: ಮೈಸೂರು ಜಿಲ್ಲೆಯಲ್ಲಿ 19 ಬೆಳೆಗಳಿಗೆ ರೈತರು ಮಾಡಿಸಬಹುದು ಬೆಳೆ ವಿಮೆ

2023-24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ- ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗಲಿದ್ದು, ಮೈಸೂರು ಜಿಲ್ಲೆಯಲ್ಲಿ 19 ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿರುತ್ತದೆ.

ಬೆಳೆ ವಿಮೆ
ಬೆಳೆ ವಿಮೆ
author img

By

Published : Jun 29, 2023, 8:19 AM IST

Updated : Jun 29, 2023, 3:52 PM IST

ಮೈಸೂರು: 2023 -24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ - ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಜಾರಿಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 19 ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿರುತ್ತದೆ.

ಜಿಲ್ಲೆಗೆ ಅಧಿಸೂಚನೆ ಮಾಡಿರುವ ಬೆಳೆಗಳ ವಿಮಾ, ವಿಮಾ ಕಂತು ಮತ್ತು ಅಂತಿಮ ನೊಂದಣಿ ದಿನಾಂಕದ ವಿವರ: ಎಳ್ಳಿನ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 11,635.13 ರೂ.ಗಳಿದ್ದು ವಿಮಾ ಕಂತು 232.70 ರೂ., ಸೂರ್ಯಕಾಂತಿ ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ, ರೂ. 16491.53, ವಿಮಾ ಕಂತು ರೂ. 329.83, ಉದ್ದು ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 13253.93 ರೂಗಳಿದ್ದು, ವಿಮಾ ಕಂತು 265.08 ರೂ. ಹೆಸರು ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 13456.28 ರೂ ಗಳಿದ್ದು ವಿಮಾ ಕಂತು 269.13 ರೂಗಳು. ಅಲಸಂಡೆ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 12141.00 ರೂ.ಗಳಿದ್ದು ವಿಮಾ ಕಂತು 1699.74 ರೂ.ಗಳಾಗಿದ್ದು, ನೋಂದಾಯಿಸಿಕೊಳ್ಳಲು ಜೂನ್ 30 ಅಂದರೆ ನಾಳೆ ಅಂತಿಮ ದಿನವಾಗಿದೆ.

farmers-can-get-crop-insurance-for-19-crops-in-mysore-district
ಬೆಳೆ ವಿಮೆ ಮಾಹಿತಿ

ನೆಲಗಡಲೆ ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 22056.15 ರೂ ಗಳಿದ್ದು, ವಿಮಾ ಕಂತು 441.12 ರೂ ಗಳು. ಇನ್ನು ಎಲೆಕೋಸು-ಓS ಬೆಳೆಗೆ ಪ್ರತಿ ಎಕರೆಗೆ ವಿಮಾ ಮೊತ್ತ 30554.85 ರೂ. ಗಳಿದ್ದು ವಿಮಾ ಕಂತು 1527.74 ರೂ. ಆಲೂಗಡ್ಡೆ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 29239.58 ರೂ ಗಳಿದ್ದು ವಿಮಾ ಕಂತು 1461.98 ರೂ. ಟೊಮೆಟೊ-ಓS ಬೆಳೆಗೆ ಪ್ರತಿ ಎಕರೆಗೆ ವಿಮಾ ಮೊತ್ತ 57265.05 ರೂ ಗಳಿದ್ದು, ವಿಮಾ ಕಂತು 2863.25 ರೂ. ಜೋಳ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 15479.78 ರೂ ಗಳಿದ್ದು, ವಿಮಾ ಕಂತು 309.60 ರೂಗಳಾಗಿದ್ದು, ನೋಂದಾಯಿಸಿಕೊಳ್ಳಲು ಜುಲೈ 15 ಅಂತಿಮ ದಿನವಾಗಿರುತ್ತದೆ.

ಹತ್ತಿ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 20133.83 ರೂ ಗಳಿದ್ದು, ವಿಮಾ ಕಂತು 1006.69 ರೂ. ಮುಸುಕಿನ ಜೋಳ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 22865.55 ರೂ ಗಳಿದ್ದು, ವಿಮಾ ಕಂತು 457.31 ರೂಗಳು. ಮುಸುಕಿನ ಜೋಳ ಬೆಳೆಗೆ (ನೀರಾವರಿ) ಪ್ರತಿ ಎಕರೆಗೆ ವಿಮಾ ಕಂತು 26103.15 ರೂ ಗಳಿದ್ದು, ವಿಮಾ ಕಂತು 522.06 ರೂಗಳು. ತೊಗರಿ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 19425.60 ರೂ ಗಳಿದ್ದು, ವಿಮಾ ಕಂತು 388.51 ರೂಗಳು. ಅರಿಶಿನ - ಓS ಬೆಳೆಗೆ ಪ್ರತಿ ಎಕರೆಗೆ ವಿಮಾ ಮೊತ್ತ 57568.58 ರೂ ಗಳಿದ್ದು, ವಿಮಾ ಕಂತು 2878.43 ರೂಗಳು, ರಾಗಿ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 17,199.75 ರೂಗಳಿದ್ದು, ವಿಮಾ ಕಂತು 344.00 ರೂ. ರಾಗಿ ಬೆಳೆಗೆ (ನೀರಾವರಿ) ಪ್ರತಿ ಎಕರೆಗೆ ವಿಮಾ ಮೊತ್ತ 20538.53 ರೂ ಗಳಿದ್ದು, ವಿಮಾ ಕಂತು 410.77 ರೂಗಳಾಗಿದ್ದು, ನೋಂದಾಯಿಸಿಕೊಳ್ಳಲು ಜುಲೈ 31 ಅಂತಿಮ ದಿನವಾಗಿರುತ್ತದೆ.

ಭತ್ತದ ಬೆಳೆಗೆ (ನೀರಾವರಿ) ಪ್ರತಿ ಎಕರೆಗೆ ವಿಮಾ ಮೊತ್ತ 37,738.28 ರೂಗಳಿದ್ದು, ವಿಮಾ ಕಂತು 754.77 ರೂಗಳಾಗಿವೆ. ಹುರುಳಿ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 8,296.35 ರೂಗಳಿದ್ದು, ವಿಮಾ ಕಂತು 165.93 ರೂಗಳಾಗಿದ್ದು, ನೋಂದಾಯಿಸಿಕೊಳ್ಳಲು ಆಗಸ್ಟ್ 16 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಸಕಾಲದಲ್ಲಿ ಬೆಳೆ ವಿಮೆಗೆ ನೋಂದಾಯಿಸಲು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಬ್ಯಾಂಕ್ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಧಾರ್​ ಪ್ಯಾನ್​ ಲಿಂಕ್​ಗೆ ನಾಳೆಯೇ ಕೊನೆಯ ದಿನ.. ಜೋಡಣೆ ಮಾಡದಿದ್ದಲ್ಲಿ ಪ್ಯಾನ್​ ನಿಷ್ಕ್ರಿಯ, ಹಲವು ಸಮಸ್ಯೆಗಳು ಉಲ್ಬಣ

Last Updated : Jun 29, 2023, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.