ಮೈಸೂರು: ಇಡೀ ಕುಟುಂಬ ನಾಗರ ಹಾವಿನ ಮರಿಯ ಜೊತೆ ಮಲಗಿದ್ದರೂ ಸಹ ಗಮನಕ್ಕೆ ಬಾರದೆ ಇರುವ ಘಟನೆ ನಗರದ ಹೆಬ್ಬಾಳ 2ನೇ ಹಂತದಲ್ಲಿ ನಡೆದಿದೆ.
ನಾಗರ ಹಾವಿನ ಮರಿಯೊಂದು ಸೋಮಸುಂದರ್ ಎಂಬುವವರ ಮನೆಯಲ್ಲಿ ಹಾಸಿಗೆಯ ಕೆಳಗೆ ಬೆಳಗ್ಗೆಯವರೆಗೂ ಇದೆ. ಆದರೆ ಇದು ಕುಟುಂಬಸ್ಥರ ಗಮನಕ್ಕೆ ಬಂದಿಲ್ಲ. ಬೆಳಗ್ಗೆ ಯೋಗ ಮುಗಿಸಿ ಹಾಸಿಗೆಯನ್ನು ತೆಗೆದಿಡಲು ಮುಂದಾದ ಸಂದರ್ಭದಲ್ಲಿ ಹಾವಿನ ಮರಿ ಎರಡು ಹಾಸಿಗೆಯ ನಡುವೆ ಕಾಣಿಸಿಕೊಂಡಿದೆ.
ಇದರಿಂದ ಗಾಬರಿಯಾದ ಕುಟುಂಬಸ್ಥರು ಸೂರ್ಯ ಕೀರ್ತಿಗೆ ಕರೆ ಮಾಡಿದ್ದಾರೆ. ಕೀರ್ತಿ ಸ್ಥಳಕ್ಕೆ ಬಂದು ನಾಗರಹಾವಿನ ಮರಿ ಸಂರಕ್ಷಿಸಿದ್ದು,ಇದು ಜನಿಸಿ 4 ದಿನವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜೂನ್ 30ರವರೆಗೆ ಲಾಕ್ಡೌನ್ ಮಾಡಲು ಹೇಳಿಲ್ಲ: ಸಚಿವ ಜಗದೀಶ್ ಶೆಟ್ಟರ್